ಖರೀದಿಸಿದ ಕಾರಿನ ಹಣ ನೀಡದೆ ವಂಚನೆ: ದೂರು
Update: 2019-12-03 22:04 IST
ಉಡುಪಿ, ಡಿ.3: ಮಾರಾಟ ಮಾಡಿದ ಕಾರಿನ ಹಣ ನೀಡದೆ ಹಾಗೂ ಬ್ಯಾಂಕಿನ ಸಾಲ ಪಾವತಿಸದೆ ವಂಚನೆ ಎಸಗಿರುವ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಗ್ರಾಮದ ಅಂಬಾಗಿಲು ಎಲ್‌ವಿಟಿ ದೇವಸ್ಥಾನದ ಹಿಂಬದಿ ನಿವಾಸಿ ಸಂದ್ಯಾ ಎಸ್.ಶೆಟ್ಟಿ ಎಂಬವರ ಹೋಂಡಾ ಸಿಟಿ ಕಾರನ್ನು ಬೆಂಗಳೂರಿನ ದ್ವಿದಿಶ್ ಎಂಬಾತ ಬೆಂಗಳೂರಿನ ರಾಜು ನಾಯಕ್ ಎಂಬವರು 3,50,000 ರೂ.ಗೆ ಖರೀದಿಸುವುದಾಗಿ ತಿಳಿಸಿದ್ದರು. ಅಲ್ಲದೇ 1,50,000ರೂ. ಶ್ರೀರಾಮ್ ಫೈನಾನ್ಸ್ನಲ್ಲಿರುವ ಸಾಲವನ್ನು ಪಾವತಿಸಲು ಒಪ್ಪಿಕೊಂಡಿದ್ದು ಹಾಗೂ ಉಳಿದ 2,00,000ರೂ. ಲಕ್ಷವನ್ನು 1 ತಿಂಗಳಲ್ಲಿ ನೀಡುವುದಾಗಿ ಹೇಳಿ ಕಾರನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಇವರು ಯಾವುದೇ ಸಾಲ ಕಟ್ಟದೆ ಹಾಗೂ ಹಣ ಕೂಡ ಕೊಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.