×
Ad

ಗಾಂಜಾ ಸೇವನೆ ಆರೋಪ : ಎಂಟು ಮಂದಿ ವಶಕ್ಕೆ

Update: 2019-12-03 22:11 IST

ಮಣಿಪಾಲ, ಡಿ.3: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲ ಹಾಗೂ ಉಡುಪಿ ಸೆನ್ ಪೊಲೀಸರು ಒಟ್ಟು ಎಂಟು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಿ.2ರಂದು ಮಣಿಪಾಲದ ವಿದ್ಯಾರತ್ನನಗರ ಬಳಿ ವನ್ಸ್ ಗುಪ್ತಾ(19), ಅಮನ್ ಗೋಪಿನಾಥ್(19), ಸುಶೇನ್ ಧವನ್(19), ಕಾರ್ತಿಕೇಯ ಅಮರ್(19), ಅಲೂರಿ ಸಾತ್ವಿಕಾ ಚೌಧುರಿ(20) ಎಂಬವರನ್ನು ಮಣಿಪಾಲ ಪೊಲೀಸರು ಮತ್ತು ಡಿ.1ರಂದು ಮಣಿಪಾಲ ದಶರಥನಗರದ ಎಂ.ಎಂ.ಟವರ್ ಬಳಿ ಶಾಶ್ವತ್ ಸದನ(18), ಅಮೀಷ್ ಖಜುರಿಯಾ(20), ಸೌರವ್ ಕೌಶಿಕ್ ಬ್ರಹ್ಮಚಾರಿ(19) ಎಂಬವರನ್ನು ಸೆನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇವರನ್ನು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು, ಪರೀಕ್ಷಿಸಿದ ತಜ್ಞರು ನೀಡಿದ ವರದಿಯಲ್ಲಿ ಇವರೆಲ್ಲರು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News