ಉಡುಪಿ: ಗೋಳಿಮರದ ಕೆಳಗೆ ಎತ್ತರದ ಜೋಡಿ ಶಿಲಾಶಾಸನ !

Update: 2019-12-03 16:47 GMT

ಉಡುಪಿ, ಡಿ. 3: ಕಟಪಾಡಿಯಿಂದ ಮುಂದೆ ಸಾಗಿ ಸುಭಾಷ್ ನಗರದ ಕುರ್ಕಾಲುವಿನ ಬೀಡುರಸ್ತೆಯಲ್ಲಿ ಬೃಹತ್ ಗೋಳಿಮರದ ಕೆಳಗೆ 7ಅಡಿ ಎತ್ತರ ಹಾಗೂ 3 ಅಡಿ ಅಗಲದ ಜೋಡಿ ಶಿಲಾಶಾಸನವೊಂದು ಇರುವುದು ಕಂಡು ಬಂದಿದೆ.

ಈ ಶಾಸನದಲ್ಲಿ ಯಾವುದೇ ಶಿಲಾಬರಹಗಳಿಲ್ಲ. ಬದಲು ಭಂಗಿಯಲ್ಲಿ ನಿಂತುಕೊಂಡ ಮನುಷ್ಯನ ಬಲಕೈಯಲ್ಲಿ ದರ್ಶನ ಪಾತ್ರಿ ಹಿಡಿದು ಕೊಳ್ಳುವಂತ ಖಡ್ಗ, ಎಡಕೈಯಲ್ಲಿ ಚಾಮರವಿದೆ. ಬೆನ್ನ ಹಿಂದೆ ಬಾಣದ ಬತ್ತಳಿಕೆಯಿದೆ. ಸ್ಪಲ್ಪಕೆಳಗೆ ಪಕ್ಕದಲ್ಲಿ ಇನ್ನೊಬ್ಬ ಕುಳ್ಳಗಿನ ಮನುಷ್ಯ ಸೇವಕನಂತೆ ಕೊಡೆ ಹಿಡಿದು ನಿಂತಿರುವಂತೆ ಕಾಣುತ್ತದೆ. ಶಾಸನದ ಕೆಳಗೆ ಗಂಟೆ ಕಟ್ಟಿದ ಆನೆಯೊಂದು ಸೊಂಡಿಲು ಮೇಲೆತ್ತಿ ನಿಂತಂತಿದೆ.

ಶಾಸನದ ಮೇಲ್ಭಾಗದಲ್ಲಿ ಸಿಂಹಘರ್ಜನೆಯಂತೆ ಉಬ್ಬು ಚಿತ್ರ ಹಾಗೂ ಸೂರ್ಯ ಚಂದ್ರ ಕಂಡು ಬರುತ್ತದೆ. ಪಕ್ಕದಲ್ಲಿರುವ ಇನ್ನೊಂದು ಶಾಸನ 5 ಅಡಿ ಎತ್ತರವಿದ್ಧು 2 ಅಡಿ ಅಗಲವಿದೆ. ಇದರಲ್ಲೂ ಮೊದಲ ಶಾಸನದಲ್ಲಿರುವಂತೆ ಚಿತ್ರಗಳು ಕಂಡುಬರುತ್ತವೆ. ಗೋಳಿಮರದ ಕಟ್ಟೆಯ ಕೆಳಗೆ ಈ ಶಾಸನ ಕಂಡುಬಂದಿದೆ ಎಂದು ಸಾಮಾಜಿಕ ಕಾರ್ಯಕರ್ತ ಗೇಶ್‌ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.

ಅನತಿ ದೂರದಲ್ಲಿ ಗರಡಿಯು ಇದ್ದು, ಈ ಶಾಸನದ ಬಗ್ಗೆ ಹೆಚ್ಚಿನ ಮಾಹಿತಿ ಸಂಶೋಧನೆಯಿಂದ ತಿಳಿಯಬೇಕಾಗಿದೆ ಎಂದು ಗಣೇಶ್ ರಾಜ್ ಸರಳೇಬೆಟ್ಟು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News