ಕಾನೂನನ್ನು ಗೌರವಿಸುವವರಿಗೆ ಪೊಲೀರು ಸ್ನೇಹಿತರಾಗುತ್ತಾರೆ: ಕಳತ್ತೂರಿನಲ್ಲಿ ಪೊಲೀಸ್ ಜನಸ್ನೇಹಿ ಸಭೆ

Update: 2019-12-03 17:02 GMT

ಕಾಪು: ಕಾನೂನನ್ನು ಗೌರವಿಸುವ ಉತ್ತಮ ನಾಗರಿಕರಿಗೆ ಪೊಲೀಸರು ಒಳ್ಳೆಯ ಜನ ಸ್ನೇಹಿತರಾಗುತ್ತಾರೆ ಯಾರು ಅಪರಾಧ ಮಾಡುತ್ತಾರೋ ಕಾನೂನನ್ನು ಗೌರವಿಸುವುದಿಲ್ಲವೋ ಅವರಿಗೆ ಪೊಲೀಸರು ಶತ್ರುಗಳಾಗುತ್ತಾರೆ ಎಂದು ಶಿರ್ವ ಠಾಣಾ ಉಪನಿರೀಕ್ಷಕರಾದ ಅಬ್ದುಲ್ ಖಾದರ್ ಹೇಳಿದರು.

ಕಳತ್ತೂರು ಕುಶಲ ಶೇಖರ ಶೆಟ್ಟಿ ಚಾಂದಿನಿ ಎ.ಸಿ ಹಾಲ್‍ನಲ್ಲಿ ನಡೆದ ಶಿರ್ವ ಠಾಣೆ ಹಾಗೂ ಸಮಾಜ ಸೇವಾ ವೇದಿಕೆ ಕಳತ್ತೂರು ಇದರ ಆಶ್ರಯದಲ್ಲಿ ನಡೆದ “ಪೊಲೀಸ್ ಜನಸ್ನೇಹಿ ಸಭೆ”ಯಲ್ಲಿ ಅವರು ಮಾತನಾಡಿದರು.

ಬೀಟ್ ಪೋಲಿಸರು ಗ್ರಾಮ ಗ್ರಾಮಗಳಲ್ಲಿ ಉತ್ತಮವಾಗಿ ನಾಗರಿಕರೊಂದಿಗೆ ಸ್ಪಂದಿಸಿ ಪೊಲೀಸ್ ಸುಧಾರಣೆ ಬಗ್ಗೆ ಸಹಕರಿಸು ತ್ತಾರೆ. ಗ್ರಾಮದ ಜನರು ಇದರ ಬಗ್ಗೆ ಎಚ್ಚೆತ್ತು ಯಾವುದೇ ಮಾಹಿತಿ ಇದ್ದರೂ ಪೊಲೀಸರಿಗೆ ತಿಳಿಸಬೇಕು ಗ್ರಾಮಸ್ಥರು ಸಹಕರಿಸಿ ದರೇ ಸಾಧ್ಯವಾದಷ್ಡು ಅಪಾರಾಧಗಳನ್ನು ಕಡಿಮೆ ಮಾಡಬಹುದು ಅದಲ್ಲದೇ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ಮಾಹಿತಿ ಯನ್ನು ಉತ್ತಮವಾಗಿ ನೀಡಿದರು.

ಅಧ್ಯಕ್ಷತೆ ವಹಿಸಿದ ಸಮಾಜ ಸೇವಾ ವೇದಿಕೆ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ ಮಾತನಾಡಿ ಪೊಲೀಸರು ನಿದ್ದೆ ಬಿಟ್ಟು ರಾತ್ರಿ ಹಗಲು ಸಾರ್ವಜನಿಕರನ್ನು ಕಾಪಾಡುತ್ತಾರೆ ನಾವು ಕೂಡಾ ಅವರನ್ನು ಗೌರವಿಸಬೇಕು ಅಲ್ಲದೆ ನಮ್ಮ ಊರಿನ ಬೀಟ್ ಪೊಲೀಸರು ಉತ್ತಮವಾಗಿ ಕೆಲಸ ನಿರ್ವಹಿಸುವುದು ಶ್ಲಾಘನೀಯ ಎಂದರು.

ಸಮಾಜ ಸೇವಾ ವೇದಿಕೆಯ ಪದಾಧಿಕಾರಿಗಳಾದ ದಿವಾಕರ ಬಿ ಶೆಟ್ಟಿ ಕಳತ್ತೂರು, ಮೊಹಮ್ಮದ್ ಪಾರೂಕ್ ಚಂದ್ರನಗರ, ದಿವಾಕರ ಡಿ ಶೆಟ್ಟಿ ಕಳತ್ತೂರು, ರಾಜೇಶ್ ಮೂಲ್ಯ ಕುತ್ಯಾರು, ಇವರನ್ನು ಇಲಾಖೆಯ ಪರವಾಗಿ ಠಾಣಾಧಿಕಾರಿ ಸಾಧನಾ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಅನಿವಾಸಿ ಭಾರತಿಯ ಉದ್ಯಮಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶೇಖರ್ ಬಿ ಶೆಟ್ಟಿ ಅಬುದಾಬಿ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಧೀರಾಜ್ ಶೆಟ್ಟಿ ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ ಬಿ ಶೆಟ್ಟಿ, ಚಂದ್ರನಗರ ಕ್ರೆಸೆಂಟ್ ಇಂಟರ್‍ನ್ಯಾಷನಲ್ ಸ್ಕೂಲ್ ಸಂಚಾಲಕ ಶಂಶುದ್ದೀನ್ ಯೂಸುಫ್, ಸಮಾಜ ಸೇವಾ ವೇದಿಕೆ ಸಂಚಾಲಕ ದಿವಾಕರ ಡಿ ಶೆಟ್ಟಿ ಕಳತ್ತೂರು, ಉಪಾಧ್ಯಕ್ಷ ರಾಜೇಶ್ ಮೂಲ್ಯ ಕುತ್ಯಾರು, ಹಿರಿಯ ಮಾಜಿ ಯೋಧರಾದ ಗೋಪಾಲಸ್ವಾಮಿ ಬೆಳಪು, ಕಳತ್ತೂರು ರಾಘವೇಂದ್ರ ಭಟ್, ಶಿರ್ವ ರೋಟರಿ ಅಧ್ಯಕ್ಷ ಸುನಿಲ್ ಕಾಬ್ರಲ್, ಎ.ಎಸ್.ಐ ಸುರೇಶ, ಎ.ಎಸ್.ಐ ಕೃಷ್ಣ ಆಚಾರ್ಯ ಬೀಟ್ ಪೊಲೀಸರಾದ ವಿನೋದ್ ಎಸ್.ಎಂ, ಸುಮಿತ್ರ, ಸಂದೀಪ್ ಕುಮಾರ್, ಸೋಮಪ್ಪ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹೆಡ್‍ಕಾನ್‍ಸ್ಟೇಬಲ್ ಧರ್ಮ, ಜಯಲಕ್ಷ್ಮೀ ಆಳ್ವ ಪಾದೂರು, ದೆಂದೂರು ದಯಾನಂದ ಶೆಟ್ಟಿ, ವಾಸು ಶೆಟ್ಟಿ, ಸ್ಟಾನಿಸ್ ಕೊಡ್ದ, ರಂಗನಾಥ್ ಶೆಟ್ಟಿ, ಲೋಕೇಶ್ ಭಟ್, ಕಾಪು ಪ್ರೆಸ್ ಕ್ಲಬ್ ಪದಾಧಿಕಾರಿಗಳಾದ ಬಾಲಕೃಷ್ಣ ಪೂಜಾರಿ ಉಚ್ಚಿಲ, ಸುರೇಶ್ ಎರ್ಮಾಳು, ಸಂತೋಷ್ ಕಾಪು ಕರುಣಾಕರ ಕಾಪು ಉಪಸ್ಥಿತರಿದ್ದರು. ದಿವಾಕರ ಡಿ ಶೆಟ್ಟಿ ಸ್ವಾಗತಿಸಿ ನಿವೃತ್ತ ಮುಖ್ಯೋಪಾಧ್ಯಾ ಯರಾದ ನಿರ್ಮಲ್ ಕುಮಾರ್ ಹೆಗ್ಡೆ ನಿರೂಪಿಸಿ ವಿನೋದ್ ಎಸ್.ಎಮ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News