ಡಿ.25ರಂದು ಉದ್ಯಮಿ ಪ್ರಕಾಶ್ ಶೆಟ್ಟಿಗೆ ಪ್ರಕಾಶಾಭಿನಂದನ ಕಾರ್ಯಕ್ರಮ

Update: 2019-12-04 11:50 GMT

*60 ಅಶಕ್ತರಿಗೆ ಆರ್ಥಿಕ ನೆರವು *18 ಜನ ಸಾಧಕರಿಗೆ ಸನ್ಮಾನ* 60 ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನದ ನೆರವು
ಮಂಗಳೂರು, ಡಿ.4: ಖ್ಯಾತ ಉದ್ಯಮಿ, ಸಮಾಜ ಸೇವಕ, ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಪ್ರಕಾಶ್ ಶೆಟ್ಟಿಯವರಿಗೆ ಡಿ.25ರಂದು ಅಭಿನಂದನಾ ಕಾರ್ಯಕ್ರಮ ‘ಪ್ರಕಾಶಾಭಿನಂದನ’ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಪ್ರಕಾಶಾಭಿನಂದನ ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಅಂದು ಸಂಜೆ 4ಕ್ಕೆ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ 60 ಅಶಕ್ತರಿಗೆ ತಲಾ ಒಂದು ಲಕ್ಷ ರೂ. ಗೌರವಧನ ವಿತರಣೆ, ವಿವಿಧ ಕ್ಷೇತ್ರಗಳ 18 ಸಾಧಕರಿಗೆ ಸನ್ಮಾನ, 60 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳು, ಸಚಿವರು ಸಂಸದರು, ದೇಶ, ವಿದೇಶಗಳ ಉದ್ಯಮಿಗಳು, ರಾಷ್ಟ್ರ, ರಾಜ್ಯ ಮಟ್ಟದ ರಾಜಕೀಯ ಮುಖಂಡರು, ಸ್ಯಾಂಡಲ್ ವುಡ್, ಬಾಲಿವುಡ್ ನಟ-ನಟಿಯರು, ಬಂಟ ಸಮಾಜದ ಗಣ್ಯರು, ಎಲ್ಲ ಸಮಾಜದ ಮುಖಂಡರ ಹಾಗೂ ಸುಮಾರು 25 ಸಾವಿರ ಜನರ ಸಮ್ಮುಖದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಮೊದಲು ಪಟ್ಲ ಸತೀಶ್ ಹಾಗೂ ಆಳ್ವಾಸ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಯಲಿದೆ ಎಂದು ಸುರೇಶ್ ಶೆಟ್ಟಿ ತಿಳಿಸಿದರು.
 ಸುದ್ದಿಗೋಷ್ಠಿಯಲ್ಲಿ ಅಭಿನಂದನಾ ಸಮಿತಿಯ ಪದಾಧಿಕಾರಿಗಳಾದ ಸಂತೋಷ್ ವಿ. ಶೆಟ್ಟಿ, ಸುರೇಶ್ ಶೆಟ್ಟಿ ಪಡುಬಿದ್ರೆ, ಎಂ.ಸುರೇಶ್ಚಂದ್ರ ಶೆಟ್ಟಿ, ದೇವಾನಂದ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಐಕಳ ಹರೀಶ್ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ದೇವಿಚರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News