ರಸ್ತೆ ದುರಸ್ತಿಗೆ ಒತ್ತಾಯಿಸಿ ಎಸ್ ಡಿ ಪಿ ಐ ಸಮಿತಿ ವತಿಯಿಂದ ಮನವಿ

Update: 2019-12-04 14:04 GMT

ಬಂಟ್ವಾಳ : ಎಸ್ ಡಿ ಪಿ ಐ ಬೋಳಂತೂರು, ಮಂಚಿ ಮತ್ತು ಕೊಳ್ನಾಡು ಗ್ರಾಮ ಸಮಿತಿ ಒಕ್ಕೂಟದಿಂದ ರಸ್ತೆ ದುರಸ್ತಿಗೆ ಒತ್ತಾಯಿಸಿ ದ.ಕ. ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಗೋಳ್ತಮಜಲು ಹಾಗೂ ಮಂಚಿ ಇದರ ನಡುವಿನ ರಸ್ತೆಯು ಹದಗೆಟ್ಟಿರುವ ಕಾರಣ ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಲವಾರು ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಎಸ್ ಡಿ ಪಿ ಐ ಗ್ರಾ.ಸ. ಒಕ್ಕೂಟದಿಂದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾದ ಡಾ. ಸೆಲ್ವಮಣಿ ಆರ್ ಅವರಿಗೆ ಮನವಿ ಸಲ್ಲಿಸಲಾಯಿತು ಎಂದು ಸಮಿತಿ ತಿಳಿಸಿದೆ.

ಈ ಸಂದರ್ಭ ಮಂಚಿ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರತೆ ಇರುವ ವೈದ್ಯಾಧಿಕಾರಿ ಮತ್ತು ದಾದಿಯರನ್ನು ದಿನದ ಪೂರ್ಣ ಅವಧಿಗೆ ತಕ್ಷಣ ನೇಮಕ ಮಾಡುವಂತೆಯೂ ವಿನಂತಿಸಲಾಯಿತು.

ಮನವಿಯನ್ನು ಸ್ವೀಕರಿಸಿದ ಅಧಿಕಾರಿಗಳು ತಕ್ಷಣವೇ ರಸ್ತೆಯನ್ನು ದುರಸ್ತಿ ಪಡಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿ ಗಳಿಗೆ ಸೂಚಿಸಿದರು.

ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಬೋಳಂತೂರು ಗ್ರಾ.ಸ. ಅಧ್ಯಕ್ಷ ಮುಹಮ್ಮದ್ ಮಾಡದ ಬಳಿ, ಮಂಚಿ ಗ್ರಾ.ಸ ಅಧ್ಯಕ್ಷ ನವಾಝ್ ಕೋಡಿಬೈಲ್, ಕೊಳ್ನಾಡು ಗ್ರಾ.ಸ. ಕಾರ್ಯದರ್ಶಿ ಬಶೀರ್ ಕೊಳ್ನಾಡು, ಸಿಎಫ್ ಐ ರಾಷ್ಟ್ರೀಯ ಸಮಿತಿ ಸದಸ್ಯ ತಫ್ಸೀರ್ ಬೋಳಂತೂರು, ಬಂಟ್ವಾಳ ಕ್ಷೇತ್ರ ಸಮಿತಿ ಸದಸ್ಯ ಪೈಝಲ್ ಮಂಚಿ, ಗ್ರಾ ಸ ಒಕ್ಕೂಟದ ಸದಸ್ಯ ಫಾರೂಕ್ ಸಾಲೆತ್ತೂರು, ನವಾಝ್ ಬೋಳಂತೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News