'ಅವೈಜ್ಞಾನಿಕ ಮೀನುಗಾರಿಕೆ ನಡೆಸಿದರೆ ಕಟ್ಟುನಿಟ್ಟಿನ ಕ್ರಮ'

Update: 2019-12-04 14:37 GMT

 ಉಡುಪಿ, ಡಿ.4: ಕರ್ನಾಟಕ ರಾಜ್ಯ ಸರಕಾರ ಸಮುದ್ರದಲ್ಲಿ ಕೆಲವೊಂದು ತರಹದ ಹಾನಿಕಾರಕ ಮೀನುಗಾರಿಕಾ ಪದ್ಧತಿಗಳನ್ನು ಈಗಾಗಲೇ ನಿಷೇಧಿಸಿದೆ. ಆದರೂ ಇತ್ತೀಚಿನ ದಿನಗಳಲ್ಲಿ ನಿಷೇಧಿತ ಮೀನುಗಾರಿಕಾ ಪದ್ಧತಿಯಿಂದ ಮೀನುಗಾರಿಕೆ ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬರುತಿವೆ.

ಈ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಇಲಾಖಾಧಿಕಾರಿಗಳ ಮತ್ತು ಮೀನುಗಾರಿಕೆ ಸಂಘ/ಸಂಸ್ಥೆಗಳ ಸಭೆಯಲ್ಲಿ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986ರ ಅನ್ವಯ ಟ್ರಾಲ್‌ಬೋಟ್‌ಗಳಲ್ಲಿ ಕಡ್ಡಾಯ 35 ಎಂ.ಎಂ. ಸ್ಕ್ವೇರ್ ಮೆಶ್‌ಕಾಡ್ ಎಂಡ್ ಬಳಕೆ, ಪರ್ಸಿನ್ ಮತ್ತು ಸಾಂಪ್ರದಾಯಿಕ ದೋಣಿಗಳಲ್ಲಿ 20 ಎಂ.ಎಂ.ಗಿಂತ ದೊಡ್ಡ ಕಣ್ಣಿನ ಬಲೆಯ ಬಳಕೆ, ಬುಲ್‌ಟ್ರಾಲ್, ಬೆಳಕು ಮೀನುಗಾರಿಕೆ, ಅಸಾಂಪ್ರದಾಯಿಕ ಪಚ್ಚೆಲೆ ಮೀನುಗಾರಿಕೆ ಇತ್ಯಾದಿ ಎಲ್ಲಾ ಅವೈಜ್ಞಾನಿಕ ಮತ್ತು ವಿನಾಶಕಾರಿ ಮೀನುಗಾರಿಕಾ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ನಿಲ್ಲಿಸುಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಆದರೂ ಸಹ ಯಾವುದೇ ನಿಷೇಧಿತ ಮೀನುಗಾರಿಕಾ ಪದ್ಧತಿಯನ್ನು ಅನುಸರಿಸುತ್ತಿರುವುದು ಕಂಡುಬಂದಲ್ಲಿ, ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಿಷೇಧಿತ ಮೀನುಗಾರಿಕಾ ಪದ್ಧತಿಗಳನ್ನು ಅನುಸರಿಸುತ್ತಿರುವ ಬೋಟುಗಳ ಮೇಲೆ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986ರನ್ವಯ ಮೀನುಗಾರಿಕೆ ಇಲಾಖಾ ವತಿಯಿಂದ ಕಟ್ಟುನಿಟ್ಟಾಗಿ ಕ್ರಮ ಜರಗಿಸಲಾಗು ವುದು ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News