ಕೆಎಂಸಿ ಮಣಿಪಾಲ, ಕಾರ್ಕಳದ ಆಸ್ಪತ್ರೆಗೆ ‘ಕಾಯಕಲ್ಪ’

Update: 2019-12-04 14:42 GMT

ಮಣಿಪಾಲ, ಡಿ.4: ಮಣಿಪಾಲದ ಕೆಎಂಸಿ ಹಾಗೂ ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಕೇಂದ್ರ ಸರಕಾರದ 2019-20ನೇ ಸಾಲಿನಕಾಯಕಲ್ಪಪ್ರಮಾಣಪತ್ರ್ರವನ್ನು ನೀಡಲಾಗಿದೆ.

ಆಸ್ಪತ್ರೆಯ ಸ್ವಚ್ಛತೆ, ನೈರ್ಮಲ್ಯ ಮತ್ತು ಸೋಂಕು ನಿಯಂತ್ರಣವನ್ನು ಉತ್ತೇಜಿಸುವಲ್ಲಿ ಆಸ್ಪತ್ರೆಗಳ ಪ್ರಯತ್ನಗಳನ್ನು ಗುರುತಿಸಿ ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗದರ್ಶಿ ಸೂತ್ರಗಳ ಪ್ರಕಾರ ಆರೈಕೆಯ ಸುಧಾರಿತ ಗುಣಮಟ್ಟಕ್ಕೆ ಈ ಪ್ರಶಸ್ತಿಯನ್ನು ನೀಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಉತ್ತೇಜಿಸುವ ಸಲುವಾಗಿ ಉನ್ನತ ಮಟ್ಟದ ಸ್ವಚ್ಛತೆ, ನೈರ್ಮಲ್ಯ ಮತ್ತು ಸೋಂಕು ನಿಯಂತ್ರಣ ಕ್ರಮವನ್ನು ಪ್ರದರ್ಶಿಸುವ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಗುರುತಿಸುವ ಮತ್ತು ಸನ್ಮಾನಿಸುವ ರಾಷ್ಟ್ರೀಯ ಉಪಕ್ರಮವಾಗಿ 2015ರ ಮೇ ತಿಂಗಳಲ್ಲಿ ಕಾಯಕಲ್ಪ ಪ್ರಶಸ್ತಿಯನ್ನು ಆರಂಭಿಸಲಾಗಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಉತ್ತೇಜಿಸುವ ಸಲುವಾಗಿ ಉನ್ನತ ಮಟ್ಟದ ಸ್ವಚ್ಛತೆ, ನೈರ್ಮಲ್ಯ ಮತ್ತು ಸೋಂಕು ನಿಯಂತ್ರಣ ಕ್ರಮವನ್ನು ಪ್ರದರ್ಶಿಸುವ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಗುರುತಿಸುವ ಮತ್ತು ಸನ್ಮಾನಿಸುವ ರಾಷ್ಟ್ರೀಯ ಉಪಕ್ರಮವಾಗಿ 2015ರ ಮೇ ತಿಂಗಳಲ್ಲಿ ಕಾಯಕಲ್ಪ ಪ್ರಶಸ್ತಿಯನ್ನು ಆರಂಭಿಸಲಾಗಿತ್ತು. ಈಗ ಖಾಸಗಿ ಅರೋಗ್ಯ ಸಂಸ್ಥೆಗಳನ್ನು ಕೂಡ ಸ್ವಚ್ಛತೆ, ನೈರ್ಮಲ್ಯ ಮತ್ತು ಸೋಂಕು ನಿಯಂತ್ರಣ ಅಭ್ಯಾಸಗಳನ್ನು ಉತ್ತೇಜಿಸುವ ಸಲುವಾಗಿ ‘ಕಾಯಕಲ್ಪ’ ಯೋಜನೆಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಆರೈಕೆಯ ಸುಧಾರಿತ ಗುಣಮಟ್ಟಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಆಸ್ಪತ್ರೆಯ ಸಾಧನೆಯ ಕುರಿತು ಮಾತನಾಡಿದ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಕೆಎಂಸಿ ಮತ್ತು ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಗಳ ತಂಡದ ಪ್ರಯತ್ನವನ್ನು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News