ಆಹಾರ ಪರವಾನಗಿ/ ನೊಂದಾವಣೆ ಮಾಡಲು ಸೂಚನೆ

Update: 2019-12-04 14:44 GMT

ಉಡುಪಿ, ಡಿ.4: ಜಿಲ್ಲೆಯಲ್ಲಿ ಈಗಾಗಲೇ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯಿದೆ 2006 ಮತ್ತು ನಿಯಮಗಳು 2011ರ ಆ.5ರಿಂದ ಜಾರಿಗೆ ಬಂದಿರುವುದರಿಂದ ಈ ಕಾಯ್ದೆಯಡಿಯಲ್ಲಿ ಆಹಾರ ಪದಾರ್ಥಗಳ ವ್ಯವಹಾರಗಳು, ಪರವಾನಗಿ ಮತ್ತು ನೊಂದಾವಣಿ ನಿಯಂತ್ರಣ 2011ರ ಕಲಂ 31ರಡಿಯಲ್ಲಿ ಎಲ್ಲಾ ಬಗೆಯ ಆಹಾರ ಪದಾರ್ಥಗಳ ವಹಿವಾಟು ದಾರರು ಪರವಾನಗಿ ಹಾಗೂ ನೊಂದಾವಣಿ ಮಾಡುವುದು ಕಡ್ಡಾಯವಾಗಿದೆ. ನೊಂದಾವಣಿ ಮತ್ತು ಲೈಸೆನ್ಸ್ ಮಾಡಿಸಲು ಜ.31 ಕೊನೆಯ ದಿನವಾಗಿದೆ.

ಜಿಲ್ಲೆಯಲ್ಲಿ ಜಿಲ್ಲಾ ಅಂಕಿತ ಅಧಿಕಾರಿಗಳು ಲೈಸೆನ್ಸ್ ಮಾಡಿಸುವ ಪ್ರಾಧಿಕಾರಿ ಯಾಗಿದ್ದು, ಆಹಾರ ಸುರಕ್ಷತಾ ಅಧಿಕಾರಿಗಳು ನೊಂದಾವಣಿ ಮಾಡುವ ಅಧಿಕಾರಿಗಳಾಗಿರುತ್ತಾರೆ. 2020ರ ಜ.31ರೊಳಗೆ ಆಹಾರ ಪರವಾನಗಿ/ ನೊಂದಾವಣಿ ಮಾಡಿಸಿಕೊಳ್ಳದಿದ್ದಲ್ಲಿ 5 ಲಕ್ಷ ರೂ. ದಂಡ ಮತ್ತು 6 ತಿಂಗಳ ಸೆರೆವಾಸ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

ಜಿಲ್ಲೆಯಲ್ಲಿರುವ ಎಲ್ಲಾ ಆಹಾರ ವಸ್ತುಗಳ ಉತ್ಪಾದಕರು, ಪ್ಯಾಕ್ಟರಿಗಳು, ಸಗಟು ವ್ಯಾಪಾರಿಗಳು, ವಿತರಕರು ಮತ್ತು ಮಾರಾಟಗಾರರು ಆಹಾರ ನೊಂದಾವಣಿ /ಪರವಾನಗಿ ಪಡೆದುಕೊಳ್ಳಬೇಕು. ಎಲ್ಲಾ ಬೇಕರಿಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳು, ವೈನ್ ಸ್ಟೋರ್‌ಗಳು, ಹೋಟೆಲ್‌ಗಳು, ಕ್ಯಾಂಟೀನ್‌ಗಳು, ಕ್ಲಬ್‌ಗಳು, ತಂಪು ಪಾನೀಯ ತಯಾರಿಕಾ ಘಟಕಗಳು, ಪ್ಯಾಕೇಜ್ಡ್ ಡ್ರಿಂಕಿಂಗ್ ನೀರಿನ ಘಟಕಗಳು, ರಸ್ತೆ ಬದಿಯ ಆಹಾರ ವ್ಯಾಪಾರಿಗಳು, ಡಾಬಾ, ಶಾಲಾ ಕಾಲೇಜು ಕಚೇರಿಯ ಕ್ಯಾಂಟೀನ್, ವಸತಿ ನಿಲಯಗಳು, ನ್ಯಾಯ ಬೆಲೆ ಅಂಗಡಿ, ಸರ್ಕಾರಿ ಮತ್ತು ಸರ್ಕಾರೇತರ ವಸತಿ ನಿಲಯಗಳು, ಕೋಳಿ, ಮೀನು ಮತ್ತು ಮಾಂಸ ಮಾರಾಟ ಅಂಗಡಿಗಳು, ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು, ಧಾರ್ಮಿಕ ಸ್ಥಳಗಳು, ಸಮುದಾಯ ಭವನ, ಕಲ್ಯಾಣ ಮಂಟಪ ಇತರ ಸ್ಥಳಗಳಲ್ಲಿ ಊಟದ ಸಂಯೋಜಕರು, ಕ್ಯಾಟರಿಂಗ್ ವ್ಯವಹಾರ ಮಾಡುವವರು, ಮೀನು ಹಾಗೂ ಇತರ ಆಹಾರ ಪದಾರ್ಥಗಳ ಸಾಗಣೆದಾರರು, ಆಹಾರ ಉಗ್ರಾಣ ಸಂಘಟನೆಗಳ ಎಲ್ಲಾ ಆಹಾರ ಸಂಸ್ಕರಣೆ ಘಟಕಗಳು ಮತ್ತು ಆಹಾರ ಪದಾರ್ಥಗಳ ಆಮದು ದಾರರು, ಎಲ್ಲಾ ಆಹಾರ ಪದಾರ್ಥ ವಹಿವಾಟುದಾರರು ಕಡ್ಡಾಯವಾಗಿ ಜ.31ರೊಳಗೆ ನೊಂದಾವಣಿ, ಪರವಾನಗಿ ನವೀಕರಣ ಪಡೆದುಕೊಳ್ಳಬೇಕು.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಅಂಕಿತ ಅಧಿಕಾರಿಗಳು (ಎಫ್‌ಎಸ್ ಎಸ್‌ಎ) ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕಚೇರಿ, ಕ್ಷಯರೋಗ ನಿಯಂತ್ರಣ ಕಟ್ಟಡ, ಅಜ್ಜರಕಾಡು, ಉಡುಪಿ (ದೂ.: 0820-2522880), ಡಾ.ವಾಸುದೇವ್, ಅಂಕಿತ ಅಧಿಕಾರಿಗಳು ಮೊ.ಸಂಖ್ಯೆ: 9449843271, ಉಚಿತ ಕರೆ ಸಂಖ್ಯೆ:1800-112100ನ್ನು ಸಂಪರ್ಕಿಸಬಹುದು.

ತಾಲೂಕುವಾರು ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ: ಉಡುಪಿ ತಾಲೂಕು-ಕೆ.ಎಸ್.ವೆಂಕಟೇಶ್ (9449996945), ಕಾರ್ಕಳ ತಾಲೂಕು- ಡಾ.ಕೃಷ್ಣಾನಂದ ಶೆಟ್ಟಿ (8277505892), ಕುಂದಾಪುರ ತಾಲೂಕು- ಡಾ. ನಾಗೂಷಣ್ ಉಡುಪ (8277505911). ಹೆಚ್ಚಿನ ಮಾಹಿತಿಗೆ -www.fssai.gov.in- ವೆಬ್‌ಸೈಟ್‌ನ್ನು ಸಂಪರ್ಕಿಸ ಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- ವೆಬ್‌ಸೈಟ್‌ನ್ನು ಸಂಪರ್ಕಿಸ ಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News