ಪ್ರಾಥಮಿಕ ಪೀಠದ ಅನುಮತಿ ಬಳಿಕವೇ ಉಚ್ಚ ನ್ಯಾಯಾಲಯದ ನೂತನ ಪೀಠಗಳ ಆರಂಭ: ಕಾನೂನು ಸಚಿವ

Update: 2019-12-04 15:49 GMT

ಹೊಸದಿಲ್ಲಿ, ಡಿ. 4: ನಿರ್ದಿಷ್ಟ ಉಚ್ಚ ನ್ಯಾಯಾಲಯದ ಪ್ರಾಥಮಿಕ ಪೀಠದ ಶಿಪಾರಸಿನ ಬಳಿಕ ಮಾತ್ರವೇ ಉಚ್ಚ ನ್ಯಾಯಾಲಯದ ಯಾವುದೇ ನೂತನ ಪೀಠ ಸ್ಥಾಪಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಲೋಕಸಭೆಗೆ ತಿಳಿಸಿದರು.

ಮೀರತ್‌ನಲ್ಲಿ ಪೀಠ ಸ್ಥಾಪಿಸಲು ಅಲಹಾಬಾದ್ ಉಚ್ಚ ನ್ಯಾಯಾಲಯದ ಶಿಫಾರಸನ್ನು ಕಾನೂನು ಸಚಿವಾಲಯ ಇನ್ನಷ್ಟೇ ಸ್ವೀಕರಿಸಬೇಕು ಎಂದು ಅವರು ಹೇಳಿದ್ದಾರೆ. ‘‘ನಿರ್ದಿಷ್ಟ ಉಚ್ಚ ನ್ಯಾಯಾಲಯದ ಪ್ರಾಥಮಿಕ ಪೀಠದ ಶಿಫಾರಸನ್ನು ಸ್ವೀಕರಿಸಿದ ಬಳಿಕ ಮಾತ್ರವೇ ಉಚ್ಚ ನ್ಯಾಯಾಲಯದ ಯಾವುದೇ ಪೀಠವನ್ನು ಸ್ಥಾಪಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ತೀರ್ಪು ನೀಡಿದೆ’’ ಎಂದು ಅವರು ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದರು.

 ನ್ಯಾಯಮೂರ್ತಿಗಳಿಗೆ ಬಂಗ್ಲೆ, ಕಟ್ಟಡಗಳಂತಹ ಅಗತ್ಯದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಸಂಬಂಧಿಸಿ ರಾಜ್ಯ ಸರಕಾರಕ್ಕೆ ಬದ್ಧತೆ ಅಗತ್ಯ ಎಂದು ಅವರು ಹೇಳಿದರು.

ಮೀರತ್‌ನಲ್ಲಿ ಪೀಠ ಸ್ಥಾಪಿಸಲು ಉಚ್ಚ ನ್ಯಾಯಾಲಯದ ಪ್ರಾಥಮಿಕ ಪೀಠದಿಂದ ಶಿಫಾರಸನ್ನು ಇನ್ನಷ್ಟೇ ಸ್ವೀಕರಿಸಬೇಕಿದೆ. ಉತ್ತರಪ್ರದೇಶ ಸರಕಾರಕ್ಕೆ ಕೂಡ ಈ ಬದ್ಧತೆ ಇದೆ. ಇವೆರೆಡೂ ಆಗದೆ, ಯಾವುದೇ ಸ್ಥಳದಲ್ಲಿ ನೂತನ ಪೀಠವನ್ನು ಸ್ಥಾಪಿಸುವುದು ಅಸಾಧ್ಯ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News