ಡಿ. 16ರಿಂದ ಈ ರಾಜ್ಯದಲ್ಲಿ ಉಚಿತ ಇಂಟರ್‌ನೆಟ್ ಸೇವೆ ಆರಂಭ

Update: 2019-12-04 16:03 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಡಿ. 4: ಜನರಿಗೆ ಉಚಿತ ಅಂತರ್ಜಾಲ ಸೌಲಭ್ಯ ನೀಡಲು ಮೊದಲ ಬ್ಯಾಚ್‌ನಲ್ಲಿ 100 ಸಾರ್ವಜನಿಕ ವೈಫೈ ಹಾಟ್‌ಸ್ಪಾಟ್‌ಗಳನ್ನು ದಿಲ್ಲಿ ಸರಕಾರ ಡಿಸೆಂಬರ್ 16ರಂದು ಆರಂಭಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಪ್ರಕಟಿಸಿದ್ದಾರೆ.

ಮುಂದಿನ 6 ತಿಂಗಳಲ್ಲಿ 11 ಸಾವಿರ ಹಾಟ್‌ಸ್ಪಾಟ್‌ಗಳ ಮೂಲಕ ನಗರಾದ್ಯಂತ ಅಂತರ್ಜಾಲ ಸೇವೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ವೈಫೈ ಸೌಲಭ್ಯ ನೀಡುವುದರೊಂದಿಗೆ ಆಪ್ 2015ರ ವಿಧಾನ ಸಭೆ ಚುನಾವಣೆ ಪ್ರಚಾರದ ಸಂದರ್ಭ ನೀಡಿದ ಎಲ್ಲ ಪ್ರಮುಖ ಭರವಸೆಗಳನ್ನು ಈಡೇರಿಸಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

‘‘ವೈಫೈ ನಮ್ಮ ಪ್ರಮುಖ ಭರವಸೆಗಳಲ್ಲಿ ಒಂದು. ಇಂದಿನ ಡಿಜಿಟಲ್ ಯುಗದಲ್ಲಿ ಕನಿಷ್ಠ ದತ್ತಾಂಶ ಬಳಿಕ ವ್ಯಕ್ತಿಯೋರ್ವನ ಮೂಲಭೂತ ಅಗತ್ಯ. ಬದುಕಿಗೆ ಅಗತ್ಯ ಇರುವ ನೀರು ಹಾಗೂ ವಿದ್ಯುತ್ ಪೂರೈಸುವಂತೆ ನಾವು ಅಂತರ್ಜಾಲ ಸೌಲಭ್ಯವನ್ನು ಕೂಡ ಒದಗಿಸುತ್ತಿದ್ದೇವೆ. ಇದರೊಂದಿಗೆ ನಾವು ಬಾಕಿ ಉಳಿದಿದ್ದ ಕೊನೆಯ ಭರವಸೆ ಈಡೇರಿಸಿದ್ದೇವೆ’’ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News