ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ : ಪದಾಧಿಕಾರಿಗಳ ಆಯ್ಕೆ

Update: 2019-12-04 16:42 GMT

ಪಡುಬಿದ್ರಿ: ರಾಜ್ಯ ಮಟ್ಟದ ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ಇದರ ಪಡುಬಿದ್ರಿ ಅಧ್ಯಕ್ಷರಾಗಿ ಸಯೀದ್ ಹೆಜಮಾಡಿ  ಆಯ್ಕೆಯಾಗಿದ್ದಾರೆ.

ಕ್ರೀಡಾ ಕ್ಷೇತ್ರದ ಸಾಧಕರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪನೆಗೊಂಡ ರಾಜ್ಯಮಟ್ಟದ ಈ ಸಂಸ್ಥೆಯು ಪಡುಬಿದ್ರಿ, ಹೆಜಮಾಡಿ, ಫಲಿಮಾರು, ಎರ್ಮಾಳು, ಮುದರಂಗಡಿ ವ್ಯಾಪ್ತಿಯನ್ನು ಒಳಗೊಂಡಿದೆ.

ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್, ನಿಝಾಮ್ ಕಂಚಿನಡ್ಕ, ಪ್ರಧಾನ ಕಾರ್ಯದರ್ಶಿ ನಿಯಾಝ್ ದೀನ್‌ಸ್ಟ್ರೀಟ್, ಜತೆ ಕಾರ್ಯದರ್ಶಿ ರಮೀರ್ ಹುಸೈನ್, ಕೋಶಾಧಿಕಾರಿ ಲಿಯಾಕತ್ ಹುಸೈನ್ ಪಡುಬಿದ್ರಿ, ಸಲಹೆಗಾರರಾಗಿ ಹಸನ್ ಬಾವ ಕಂಚಿನಡ್ಕ, ಕ್ರೀಡಾ ಕಾರ್ಯದರ್ಶಿ ಮರ್ವನ್ ದೀನ್‌ಸ್ಟ್ರೀಟ್, ಆತಿಫ್ ಮುದರಂಗಡಿ, ತಶ್ರೀಫ್ ಹೆಜಮಾಡಿ, ಏರಿಯಾ ಉಸ್ತುವಾರಿ ರಿಯಾಝ್ ಮುದರಂಗಡಿ, ಶಫಿಕ್ ಕಂಚಿನಡ್ಕ, ಮಯ್ಯದ್ದಿ ಪಡುಬಿದ್ರಿ, ಇಮ್ರಾನ್ ಎಸ್.ಎಸ್ ರೋಡ್, ಇಮ್ರಾನ್ ಕೋಡಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News