ಅಸೈ : ವಿದ್ಯುತ್ ಶಾಕ್ ಗೆ ಮಹಿಳೆ ಬಲಿ
Update: 2019-12-04 22:26 IST
ಉಳ್ಳಾಲ : ಬಟ್ಟೆಗಳನ್ನು ಒಗೆದು ಬಳಿಕ ಅದನ್ನು ಒಣಗಿಸಲು ಹಾಕುತ್ತಿದ್ದ ಸಂದರ್ಭ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಜನಾಡಿ ಗ್ರಾಮದ ಅಸೈ ಮದಕ ಎಂಬಲ್ಲಿ ಬುಧವಾರ ಸಂಭವಿಸಿದೆ.
ಮೃತ ಮಹಿಳೆಯನ್ನು ಅಸೈ ಮದಕ ನಿವಾಸಿ ನಾಗೇಶ್ ಎಂಬವರ ಪತ್ನಿ ರೋಹಿಣಿ (50) ಎಂದು ಗುರುತಿಸಲಾಗಿದೆ.
ರೋಹಿಣಿ ಅವರು ಬಟ್ಟೆ ಒಗೆದು ಬಳಿಕ ಅಂಗಳದಲ್ಲಿ ಅದನ್ನು ಒಣಗಿಸಲು ತಂತಿಯ ಹಗ್ಗಕ್ಕೆ ಹಾಕುತ್ತಿದ್ದ ವೇಳೆ ಅಂಗಳದಲ್ಲಿ ಬಲ್ಪ್ ಹಾಕಲು ಎಳೆದಿದ್ದ ವಿದ್ಯುತ್ ವಯರ್ ಕೈಗೆ ಸ್ಪರ್ಶಿಸಿ ವಿದ್ಯುತ್ ಶಾಕ್ ತಗಲಿದ್ದು ಮನೆ ಸಮೀಪದವರು ಮೈನ್ ಸ್ವಿಚ್ ತೆಗೆದು ಅವರನ್ನು ಬದುಕಿಸಲು ಯತ್ನಿಸಿದರೂ ಫಲಕಾರಿಯಾಗಿಲ್ಲ ಎಂದು ತಿಳಿದುಬಂದಿದೆ.
ಮೃತರಿಗೆ ಓರ್ವ ಪುತ್ರಿ ಹಾಗೂ ಪತಿ ಇದ್ದಾರೆ. ಪತಿ ಪತ್ನಿ ಇಬ್ಬರೂ ಬೀಡಿ ಕಟ್ಟಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.