ಡಿ.8 ಉಚಿತ ಕ್ಯಾನ್ಸರ್ ತಪಾಸಣೆ, ತಿಳುವಳಿಕೆ ನೀಡುವ ಶಿಬಿರ

Update: 2019-12-04 16:58 GMT

ಬಂಟ್ವಾಳ, ಡಿ. 4: ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್, ರೋಟರಿಕ್ಲಬ್ ಬಂಟ್ವಾಳ ಟೌನ್, ರೋಟರಿ ಕ್ಲಬ್ ಮಡಂತ್ಯಾರ್ ಇವರ ಜಂಟಿ ಆಶ್ರಯದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ತಿಳುವಳಿಕೆ ನೀಡುವ ಶಿಬಿರವು ಡಿ.8 ರಂದು ಲೊರೆಟ್ಟೋ ಚರ್ಚ್ ನ ವಠಾರದ ಮಿನಿ ಸಭಾಂಗಣದಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಮತ್ತು ರೋಟರಿಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ತಿಳಿಸಿದ್ದಾರೆ. 

ಅವರು ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಮಂಗಳೂರಿನ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಡಾ.ಬಿ.ಆರ್ ಮತ್ತು ಸಿ.ಆರ್.ಶೆಟ್ಟಿ ಪೌಂಡೇಶನ್, ಬೆಂಗಳೂರಿನ ಇಂಡಿಯನ್ ಕ್ಯಾನ್ಸರ್ ಸೊಸೈಟಿಯು ಈ ಶಿಬಿರದ ಸಹಯೋಗವನ್ನು ನೀಡುತ್ತಿದ್ದು, ಮಂಗಳೂರು ಎ.ಜೆ.ಆಸ್ಪತ್ರೆಯ ಕನ್ಸಲ್ಟೆಂಟ್ ಮೆಡಿಕಲ್ ಅಂಕೊಲಾಜಿಸ್ಟ್ ಡಾ.ರಚನ್ ಶೆಟ್ಟಿ ಕೆ.ಎಸ್.ಅವರು ಮಾಹಿತಿ ನೀಡಲಿದ್ದಾರೆ ಎಂದು ಅವರು ವಿವರಿಸಿದರು.

ಈ ಶಿಬಿರದಲ್ಲಿ ಪುರುಷರು ಮತ್ತು ಸ್ತ್ರೀಯರನ್ನು ಪ್ರತ್ಯೇಕವಾಗಿ ತಪಾಸಣೆ ನಡೆಸಲಾಗುತ್ತಿದೆ. ವೀಡಿಯೋ ಪ್ರದರ್ಶನದ ಮೂಲಕ ಕ್ಯಾನ್ಸರ್ ಕುರಿತ ಮಾಹಿತಿಯನ್ನು ನೀಡಲಾಗುತ್ತದೆ. ತಪಾಸಣೆಯ ವೇಳೆ ಕ್ಯಾನ್ಸರ್ ರೋಗ ಪತ್ತೆಯಾದಲ್ಲಿ ಅಂತವರಿಗೆ ಮುಂದಿನ ಚಿಕಿತ್ಸೆ ನೀಡುವ ಕುರಿತು ವೈದ್ಯರು ಕ್ರಮಕೈಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಯರಾಜ್ ಬಂಗೇರ, ಅವಿಲ್ ಮನೇಜಸ್, ಎಚ್ ರಾಮಚಂದ್ರ ಶೆಟ್ಟಿಗಾರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News