×
Ad

ಉಪ್ಪಿನಂಗಡಿ: ಗೃಹ ರಕ್ಷಕ ದಳದ ಬಸ್ಸಿಗೆ ಲಾರಿ ಢಿಕ್ಕಿ

Update: 2019-12-04 22:33 IST

ಉಪ್ಪಿನಂಗಡಿ: ಗೃಹ ರಕ್ಷಕದಳದ ಬಸ್ಸಿಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಅದರಲ್ಲಿದ್ದ ಗೃಹರಕ್ಷಕದಳದ ಕ್ರೀಡಾಳುಗಳು ಅಪಾಯದಿಂದ ಪಾರಾದ ಘಟನೆ  ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಬುಧವಾರ ನಡೆದಿದೆ.

ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ದ.ಕ. ಜಿಲ್ಲೆಯಿಂದ ಆಯ್ಕೆಗೊಂಡ ಗೃಹ ರಕ್ಷಕ ದಳದ ಸಿಬ್ಬಂದಿ ಯನ್ನು ಕರೆದೊಯ್ಯುತ್ತಿದ್ದ ಬಸ್ಸಿಗೆ ಬೆದ್ರೋಡಿ ಬಳಿಯ ಮುಗೇರಡ್ಕ ತಿರುವಿನ ಬಳಿ ಲಾರಿಯೊಂದು ಢಿಕ್ಕಿ ಹೊಡೆಯಿತು. ಘಟನೆಯಿಂದ ಬಸ್ಸಿಗೆ ಹಾನಿಯಾಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನುಳಿದ ಕ್ರೀಡಾಪಟುಗಳೆಲ್ಲಾ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News