ಕ್ಯಾಂಪಸ್ ಫ್ರಂಟ್ ವತಿಯಿಂದ ಬಾಬರಿ ಮಸೀದಿ ತೀರ್ಪಿನ ಕುರಿತು ಅಧ್ಯಯನ ತರಗತಿ

Update: 2019-12-04 17:05 GMT

ಮಂಗಳೂರು : ಕ್ಯಾಂಪಸ್ ಫ್ರಂಟ್ ಕರ್ನಾಟಕ ವತಿಯಿಂದ ಬಾಬರಿ ಮಸೀದಿ ಪ್ರಕರಣದ ಕುರಿತು ಕಾನೂನು  ವಿದ್ಯಾರ್ಥಿಗಳಿಗೆ  ಅಧ್ಯಯನ ತರಗತಿಯನ್ನು ಮಂಗಳೂರು ಕಚೇರಿಯಲ್ಲಿ ಹಮ್ಮಿಕೊಳ್ಳಲಾಯಿತು.

ಹೈ ಕೋರ್ಟ್ ನ್ಯಾಯವಾದಿ ಅಬ್ದುಲ್ ಮಜೀದ್ ಖಾನ್  ವಿದ್ಯಾರ್ಥಿಗಳಿಗೆ ಬಾಬರಿ ಮಸೀದಿ ಪ್ರಕರಣ ಮತ್ತು ಅದರ ತೀರ್ಪಿನ ಕುರಿತು ಮತನಾಡಿ 'ಬಾಬರಿ ಮಸೀದಿಗೆ ದೇಶದಲ್ಲಿ ಒಂದು ಇತಿಹಾಸವಿತ್ತು  ಫ್ಯಾಸಿಸ್ಟರು ಈ ಮಸೀದಿಯ ಬಗ್ಗೆ ವಿವಾದ ಮಾಡಿ  ಭಾವನಾತ್ಮಕ ವಿಚಾರವಾಗಿ ಪರಿವರ್ತಿಸಿ ಕೊನೆಗೆ ಅದನ್ನು ಧ್ವಂಸ ಮಾಡುವ ಮೂಲಕ ಅವರ ನೈಜ ರಾಜಕೀಯ ಅಜೆಂಡಾ ಯಶಸ್ವಿಗೊಳಿಸಿದರು.

ಈ ವಿವಾದದ ಬಗ್ಗೆ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪು ಕೂಡ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ ಬಾಬರಿ ಮಸೀದಿ ದ್ವಂಸ ಮಾಡಿರವುದು ತಪ್ಪು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದರೂ ಅದೇ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ನ್ಯಾಯಾಲಯ ಅವಕಾಶ ಮಾಡಬೇಕಾಗಿತ್ತು ಎಂದು ಅವರು ಹೇಳಿದರು. ಬಾಬರಿ ಮಸೀದಿ ತೀರ್ಪಿನ ಮರು ಪರಿಶೀಲನೆಯ ಹೋರಾಟದಲ್ಲಿ ಎಲ್ಲರೂ ಕೈ ಜೋಡಿಸಬೇಕಾಗಿ ಅವರು ಕರೆ ನೀಡಿದರು.

ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಮಾತನಾಡಿ ಬಾಬರಿ ಮಸೀದಿ ತೀರ್ಪಿನ ಕುರಿತು ಯುವಕರು ವಿದ್ಯಾರ್ಥಿಗಳು ಮಾತನಾಡಬೇಕಾಗಿದೆ. ಅಲ್ಲದೇ ಈ ತೀರ್ಪಿನ ಬಗ್ಗೆ ಹೆಚ್ಚು ಹೆಚ್ಚು ವಿಮರ್ಶೆಗಳಾಗಬೇಕಾಗಿದೆ ಅದಕ್ಕಾಗಿ ಕ್ಯಾಂಪಸ್ ಫ್ರಂಟ್ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಲಿದೆ ಎಂದು ಹೇಳಿದರು.

ರಾಜ್ಯ ಕಾರ್ಯದರ್ಶಿ ಅಥಾವುಲ್ಲಾ ಪೂಂಜಲ್ ಕಟ್ಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News