×
Ad

ಸುಜೀರ್: ಶಾಲಾ ಕಟ್ಟಡ ಕೆಡವಲು ಬಹಿರಂಗ ಹರಾಜು

Update: 2019-12-05 14:06 IST

ಬಂಟ್ವಾಳ, ಡಿ.5: ಬಂಟ್ವಾಳ ತಾಲೂಕಿನ ಪುದು ಗ್ರಾಮದಲ್ಲಿರುವ ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆ ಸುಜೀರು ಇಲ್ಲಿನ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಈ ಕಟ್ಟಡವನ್ನು ಕೆಡವಲು ತಾಲೂಕು ಪಂಚಾಯತ್ ಹಾಗೂ ಶಿಕ್ಷಣ ಇಲಾಖೆಯಿಂದ ಅನುಮತಿ ದೊರೆತ ಹಿನ್ನಲೆಯಲ್ಲಿ ಬಹಿರಂಗ ಹರಾಜು ಕರೆಯಲಾಗಿದೆ.

 ಆಸಕ್ತರು ಈ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ಹರಾಜಿನ ಮೊತ್ತವನ್ನು ಬರೆದು ಶಾಲಾ ಮುಖ್ಯಶಿಕ್ಷಕರಿಗೆ ಡಿ.16ರೊಳಗೆ ಖುದ್ದಾಗಿ ಸಲ್ಲಿಸಬೇಕು. ಅದರ ನಂತರ ಸಲ್ಲಿಕೆಯಾಗುವ ಯಾವುದೇ ಬಿಡ್ಡನ್ನು ಸ್ವೀಕರಿಸಲಾಗುವುದಿಲ್ಲ. ಸರಕಾರಿ ನಿಯಮಾವಳಿ ಪ್ರಕಾರ ಈ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಸುಜೀರ್ ಶಾಲೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News