ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಡಿ.ಎಚ್.ಒ.ಗೆ ಎಸ್ಡಿಪಿಐ ಮನವಿ

Update: 2019-12-05 09:00 GMT

ಬಂಟ್ವಾಳ, ಡಿ.5: ಬಂಟ್ವಾಳ ತಾಲೂಕಿನ ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ಸಹಿತ ವಿವಿಧ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಮಂಚಿ ವಲಯ ಸಮಿತಿಯ ವತಿಯಿಂದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.

ಸುಮಾರು 5 ಗ್ರಾಮದ ನಿವಾಸಿಗಳು ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಂದು ಸೇವೆಯನ್ನು ಪಡೆಯುತ್ತಿದ್ದು, ಇಲ್ಲಿನ ಸೇವಾ ಗುಣಮಟ್ಟವನ್ನು ಹೆಚ್ಚಿಸುವಂತೆ, ದಿನದ 24 ಗಂಟೆ ವೈದ್ಯರ ಸೇವೆ ಸಹಿತ ಆಸ್ಪತ್ರೆಯನ್ನು ತೆರೆದಿಡುವುದು, ವೈದ್ಯರ, ಸಿಬ್ಬಂದಿಯ ಭರ್ತಿ, ಆ್ಯಂಬುಲೆನ್ಸ್ ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

 ನಿಯೋಗದಲ್ಲಿ ಎಸ್ಡಿಪಿಐ ಮಂಚಿ ವಲಯ ಸಮಿತಿಯ ಅಧ್ಯಕ್ಷ ನವಾಝ್ ಕೋಡಿಬೈಲ್, ದ.ಕ. ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಪುರಸಭಾ ಸಮಿತಿ ಸದಸ್ಯರಾದ ಫೈಝಲ್ ಮಂಚಿ, ಕೊಲ್ನಾಡು ಗ್ರಾಮ ಸಮಿತಿ ಕಾರ್ಯದರ್ಶಿ ಬಶೀರ್ ಕೊಲ್ನಾಡು, ಕಾರ್ಯದರ್ಶಿ ಜಬ್ಬಾರ್ ಮಂಚಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News