ಮಂಗಳೂರು : ಮರ್ಸಿಡಿಸ್ ಬೆಂಝ್ ನೂತನ ಎಸ್ ಯು ವಿ ಜಿ ಎಲ್ ಸಿ ಬಿಡುಗಡೆ

Update: 2019-12-05 16:29 GMT

ಮಂಗಳೂರು, ಡಿ. 5 : ಮರ್ಸಿಡಿಸ್ ಬೆಂಝ್ ಕಾರುಗಳ ಅಧಿಕೃತ ಡೀಲರ್ ಸುಂದರಂ ಮೋಟರ್ಸ್ ಮಂಗಳೂರಿನ ಮೇರಿ ಹಿಲ್ ನಲ್ಲಿರುವ ಶೋರೂಮ್ ನಲ್ಲಿ ಗುರುವಾರ ನೂತನ ವಿಲಾಸಿ ಎಸ್ ಯು ವಿ  ಜಿ ಎಲ್ ಸಿ ಯನ್ನು ಅನಾವರಣಗೊಳಿಸಲಾಯಿತು. 

ಈ ನೂತನ ಎಸ್ ಯು ವಿ ಯಲ್ಲಿ  ವಿಲಾಸಿ ವಾಹನಗಳ ವಿಭಾಗದಲ್ಲೇ ಅತ್ಯಂತ ಆಧುನಿಕ ಹಾಗು ಕ್ರಾಂತಿಕಾರಿ ಸೌಲಭ್ಯಗಳಿವೆ ಎಂದು ಸುಂದರಂ ಮೋಟರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದಲ್ಲೇ ಎನ್ ಟಿ ಜಿ 6 ಟೆಲಿಮ್ಯಾಟಿಕ್ಸ್ ನೊಂದಿಗೆ ಬಂದಿರುವ ಪ್ರಪ್ರಥಮ ಮರ್ಸಿಡಿಸ್ ಬೆಂಝ್ ವಾಹನ ಇದಾಗಿದ್ದು ನೂತನ ಬಿಎಸ್ 6 ಇಂಜಿನ್ ಇದರಲ್ಲಿದೆ. ನೂತನ ಅತ್ಯಾಧುನಿಕ ಇನ್ಫೋಟೆನ್ ಮೆಂಟ್ ಎಂಬಿಯುಎಕ್ಸ್ ಈ ವಾಹನದ ವಿಶೇಷತೆ. ಅತ್ಯಾಕರ್ಷಕ ವಿನ್ಯಾಸ, ಉತ್ಕೃಷ್ಟ ತಾಂತ್ರಿಕತೆ ಹಾಗು ಕನೆಕ್ಟಿವಿಟಿ ಇತ್ಯಾದಿ ಹಲವು ಇತರ ವಿಶೇಷತೆಗಳು ಜಿ ಎಲ್ ಸಿ ಯಲ್ಲಿವೆ ಎಂದು ಪ್ರಕಟಣೆ ತಿಳಿಸಿದೆ.

ವಿಲಾಸಿ ಹಾಗು ಅತ್ಯಂತ ವೇಗವಾಗಿ ಚಲಾಯಿಸುವಂತಹ ಕಾರುಗಳನ್ನು ಇಷ್ಟಪಡುವ ನಗರವಾಸಿಗಳಿಗೆಂದೇ ವಿಶೇಷವಾಗಿ ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. what3words ಎಂಬ ವಿನೂತನ ಲೊಕೇಶನ್ ಟೆಕ್ನಾಲಜಿ ಈ ವಾಹನದಲ್ಲಿದ್ದು ಅದು ಚಲಾಯಿಸುವವರಿಗೆ ತಮ್ಮ ಗುರಿ ತಲುಪಲು ಬಹಳ ಸಹಕಾರಿಯಾಗಲಿದೆ.

ಮರ್ಸಿಡಿಸ್ ಬೆಂಝ್ ಸದಾ ಗ್ರಾಹಕ ಕೇಂದ್ರಿತ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ. ಅತ್ಯುತ್ತಮ ಡ್ರೈವಿಂಗ್ ಅನುಭವ ನೀಡುವುದು ಬೆಂಝ್ ವಿಶೇಷತೆ. ಇದೇ ನಿಟ್ಟಿನಲ್ಲಿ ಇದೀಗ ಎಂಬಿಯುಕ್ಸ್ ತಂತ್ರಜ್ಞಾನದೊಂದಿಗೆ ಹೊಸ ಜಿಎಲ್ ಸಿ ಬಂದಿದೆ. ಎಸ್ ಯು ವಿ ವಾಹನದ ವೇಗ ಹಾಗು ಒರಟುತನದ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಈ ವಾಹನದಲ್ಲಿದ್ದು ಖಂಡಿತ ಗ್ರಾಹಕರ ಮನಗೆಲ್ಲಲಿದೆ ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾದ ಆಡಳಿತ ನಿರ್ದೇಶಕ ಹಾಗು ಸಿಇಒ ಮಾರ್ಟಿನ್ ಶ್ವೆನ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9148155175

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News