ಡಿ.7ರಿಂದ ಎಸ್‌ಐಓ ಪರಿಸರ ಸಂರಕ್ಷಣೆ ಅಭಿಯಾನ

Update: 2019-12-05 14:41 GMT

ಉಡುಪಿ, ಡಿ.5: ಉಡುಪಿ ಎಸ್‌ಐಓ, ದೊಡ್ಡಣಗುಡ್ಡೆ ಡಾ.ಬಾಳಿಗಾ ಮೆಮೊರಿಯಲ್ ಆಸ್ಪತ್ರೆ ಮತ್ತು ಕರ್ನಾಟಕ ಸಂವೇದನಾ ಆರ್ಟ್ಸ್ ಆ್ಯಂಡ್ ಕಲ್ಚರ್ ಇವುಗಳ ಸಹಯೋಗದೊಂದಿಗೆ ಡಿ.7ರಿಂದ 30ರವರೆಗೆ ಪರಿಸರ ಸಂರಕ್ಷಣಾ ಜಾಗೃತಿಗಾಗಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಡಿ.7ರಂದು ಸಂಜೆ 4:30ಕ್ಕೆ ಮಣಿಪಾಲದ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್‌ನಲ್ಲಿ ಅಭಿಯಾನದ ಉದ್ಘಾಟನೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್ ಕಣಿವೆ, ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ, ಮನೋರೋಗ ತಜ್ಞ ಡಾ.ಪಿ.ವಿ. ಭಂಡಾರಿ, ಪ್ರೇಮಾನಂದ ಕಲ್ಮಾಡಿ, ಎಸ್‌ಐಓ ರಾಜ್ಯಾಧ್ಯಕ್ಷ ನಿಹಾಲ್ ಕಿದಿಯೂರು ಭಾಗವಹಿಸ ಲಿರುವರು ಎಂದು ಸಂವೇದನಾ ಆರ್ಟ್ ಅಂಡ್ ಕಲ್ಚರಲ್ ಪೋರಂನ ಕಾರ್ಯದರ್ಶಿ ದಾನಿಶ್ ಚೆಂಡಾಡಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಅಭಿಯಾನದ ಪ್ರಯುಕ್ತ ಜಿಲ್ಲೆಯಾದ್ಯಂತ ಮೊಹಲ್ಲ ಸಭೆಗಳನ್ನು ನಡೆಸ ಲಾಗುವುದು. ಡಿ.14ರಂದು ಗಂಗೊಳ್ಳಿಯಲ್ಲಿ ಬೃಹತ್ ಕಾಲ್ನಡಿಗೆ ಜಾಥ, ಡಿ.17-19ರವರೆಗೆ ಕಾಪು, ಉಡುಪಿ, ಕಾರ್ಕಳ, ಕುಂದಾಪುರ ನಗರ ಪ್ರದೇಶ ಗಳಲ್ಲಿ ಕಾರ್ನರ್ ಮೀಟಿಂಗ್ ಮತ್ತು ಬೀದಿನಾಟಕ ಆಯೋಜಿಸಲಾಗುವುದು.

ಶಾಲಾ -ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅದೇರೀತಿ ಮನೆಗೊಂದು ಗಿಡ ಪರಿಕಲ್ಪನೆಯನ್ನು ಪರಿಚಯಿಸಿ ಪ್ರತಿ ಮನೆಗೊಂದು ಗಿಡವನ್ನು ವಿತರಿಸ ಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎ.ವಿ.ಬಾಳಿಗ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ, ಅಭಿಯಾನ ಸಂಚಾಲಕ ನಾಸೀರ್ ಹೂಡೆ, ಎಸ್‌ಐಓ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ, ಕಾರ್ಯದರ್ಶಿ ಶಾರೂಕ್ ತೀರ್ಥಹಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News