ಮಾನಸಿಕ ಅಸ್ವಸ್ಥ ತಾಯಿ, ಬುದ್ಧಿಮಾಂದ್ಯ ಮಗನ ರಕ್ಷಣೆ

Update: 2019-12-05 14:47 GMT

ಉಡುಪಿ, ಡಿ.5: ಮನೆಯೊಂದರಲ್ಲಿ ಅಸಹಾಯಕ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ಮಾನಸಿಕ ಅಸ್ವಸ್ಥ ತಾಯಿ, ಬುದ್ಧಿಮಾಂದ್ಯ ಮಗನನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಗುರುವಾರ ರಕ್ಷಿಸಿ ಪುನವರ್ಸತಿ ಕಲ್ಪಿಸಿದ್ದಾರೆ.

ಬೊಮ್ಮರಬೆಟ್ಟು ಗ್ರಾಮದ ಪಡ್ಯಾಂ ನಿವಾಸಿಯಾಗಿರುವ ಸುಮತಿ ಕಾಮತ್ (55) ಹಾಗೂ ಇವರ ಒಬ್ಬನೆ ಮಗ ದಯಾನಂದ ಕಾಮತ್(23) ಎಂಬವ ರನ್ನು ಮಾಹಿತಿ ತಿಳಿದ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ರಕ್ಷಿಸಿ ಬ್ರಹ್ಮಾವರದ ಅಪ್ಪ ಅಮ್ಮ ಅನಾಥಾಲಯ ದಲ್ಲಿ ಪುರ್ನವಸತಿ ಕಲ್ಪಿಸಿದ್ದಾರೆ. ಆಶ್ರಮ ಸಂಚಾಲಕ ಪ್ರಶಾಂತ್ ಪೂಜಾರಿ ಕೂರಾಡಿ ಇವರಿಗೆ ಆಶ್ರಯ ಒದಗಿಸಿದ್ದಾರೆ.

ಬುದ್ಧಿಮಾಂದ್ಯ ಮಗನೊಂದಿಗೆ ವಾಸವಾಗಿರುವ ಸುಮತಿ, ಕೆಲವು ವರ್ಷ ಗಳಿಂದ ಮಾನಸಿಕ ಕಾಯಿಲೆಗೆ ತುತ್ತಾಗಿದ್ದರು. ಇದರಿಂದ ಇವರು ನಾಗರಿಕ ಸಮಾಜದ ಸಂಪರ್ಕವನ್ನು ಕಡಿದುಕೊಂಡು ಮನೆಯಲ್ಲಿಯೇ ಇದ್ದರು. ಸುಮತಿಯ ಪತಿ ಕೆಲವು ವರ್ಷಗಳ ಹಿಂದೆ ಮನೆ ಬಿಟ್ಟು ಹೋದವರು ಈವರೆಗೆ ವಾಪಾಸ್ಸು ಬರಲೇ ಇಲ್ಲ. ಇವರ ದಯನೀಯ ಸ್ಥಿತಿ ಕಂಡು ಮನೆ ಪಕ್ಕದಲ್ಲಿರುವ ಸಂಬಂಧಿಗಳು ಆಹಾರ ಒದಗಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News