ಉಡುಪಿ : ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Update: 2019-12-05 14:49 GMT

ಉಡುಪಿ, ಡಿ.5: ಉಡುಪಿ ಸಿಎಸ್‌ಐ ಲಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಹಿರಿಯ ನಾಗರಿಕರ ಸಂಘ, ಜಮಿಯ್ಯತುಲ್ ಫಲಾಹ್ ಉಡುಪಿ ಘಟಕ, ವೈದ್ಯಕೀಯ ಪ್ರತಿನಿಧಿಗಳ ಸಂಘ, ಅಕೇಸಿಸ್ ಫಾರ್ಮಾ ಇವುಗಳ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಆಸ್ಪತ್ರೆಯಲ್ಲಿ ಗುರುವಾರ ಜರಗಿತು.

ಶಿಬಿರವನ್ನು ಹಿರಿಯ ನಾಗರಿಕರ ಸಂಘದ ಮುಖ್ಯಸ್ಥ ಸಿ.ಎಸ್.ರಾವ್ ಉದ್ಘಾಟಿಸಿದರು. ಬಡಗಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಎಸ್., ಜಮಿಯ್ಯತುಲ್ ಫಲಾಹ್‌ನ ಕಾಸಿಂ ಬಾರ್ಕೂರ್, ಸಮೀರ್ ಮಹಮ್ಮದ್, ವಿಶ್ವನಾಥ್ ಹೆಗ್ಡೆ, ದೇವರಾಜ್, ಸದಾನಂದ ಹೆಗ್ಡೆ, ಪ್ರಸನ್ನ ಕಾರಂತ್ ಮುಖ್ಯ ಅಥಿತಿಗಳಾಗಿದ್ದರು.

ವೈದ್ಯಾಧಿಕಾರಿಗಳಾದ ಡಾ.ಎಸ್.ಪಿ.ಆನಂದ್, ಡಾ.ದೀಪಾ ರಾವ್, ಡಾ. ಲೀಲಾ ಥೋಮಸ್, ಡಾ.ಶ್ರೀಪತಿ, ಡಾ.ನಾಗೇಶ್, ಡಾ.ಸಾರಿಕಾ, ಡಾ.ಸುಮನ ಆರ್. ಶೆಟ್ಟಿ, ಡಾ.ಆಂಡ್ರಿಯಾ ಸಾಲಿನ್ಸ್ ಉಪಸ್ಥಿತರಿದ್ದರು.

ಶಿಬಿರದ ಸಂಘಟಕ ರೋಹಿ ರತ್ನಾಕರ್ ಸ್ವಾಗತಿಸಿದರು. ರಾಘವೇಂದ್ರ ಕರ್ವಾಲ್ ವಂದಿಸಿದರು. ಸುಮಾರು 250ಕ್ಕೂ ಅಧಿಕ ಮಂದಿ ಶಿಬಿದ ಪ್ರಯೋಜನ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News