×
Ad

ಡಿ. 8: ಸೋಮೇಶ್ವರ ಉಚ್ಚಿಲದಲ್ಲಿ ಸಮಸ್ತ ಪ್ರಚಾರ ಸಮ್ಮೇಳನ

Update: 2019-12-05 20:42 IST

ಮಂಗಳೂರು, ಡಿ.5: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್‌ನ 60ನೇ ವಾರ್ಷಿಕ ಕಾರ್ಯಕ್ರಮವು ಡಿ.27,28 ಮತ್ತು 29ರಂದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆಯಲಿದ್ದು, ಇದರ ಪ್ರಚಾರ ಸಮ್ಮೇಳನ ಮತ್ತು ವಾರ್ಷಿಕ ಮಜ್ಲಿಸುನ್ನೂರು ಕಾರ್ಯ ಕ್ರಮವು ಡಿ.8ರಂದು ಅಪರಾಹ್ನ 4ಕ್ಕೆ ಸೋಮೇಶ್ವರ ಉಚ್ಚಿಲ ಜಂಕ್ಷನ್‌ನಲ್ಲಿ ಜರುಗಲಿದೆ ಎಂದು ಎಸ್ಕೆಎಸ್ಸೆಸೆಫ್ ಉಚ್ಚಿಲ ಶಾಖೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಎಸ್.ಬಿ. ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೈಯದ್ ಝೈನುಲ್ ಆಬಿದಿನ್ ಜಿಫ್ರಿ ತಂಙಳ್ ಪೊಸೋಟು ಅವರ ದುಆದೊಂದಿಗೆ ಸಮಸ್ತ ಕರ್ನಾಟಕ ಮುಶಾವರ ಉಪಾಧ್ಯಕ್ಷ ಅಲ್‌ಹಾಜ್ ಇಬ್ರಾಹೀಂ ಬಾಖವಿ ಕೆ.ಸಿ.ರೋಡ್ ಉದ್ಘಾಟಿಸಲಿದ್ದಾರೆ. ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಪ್ರಭಾಷಣವನ್ನು ರಿಯಾಝ್ ರಹ್ಮಾನಿ ಹಾಗೂ ಹಾಶಿರ್ ಹಾಮಿದಿ ಕುಂಜತ್ತೂರು ಮಾಡಲಿ ದ್ದಾರೆ. ವಾಗ್ಮಿ ಉಸ್ತಾದ್ ಖಲೀಲ್ ಹುದವಿ ಅಲ್‌ಮಾಲಿಕಿ ಕಾಸರಗೋಡ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಹಿದಾಯತುಲ್ಲಾ ಉಚ್ಚಿಲ, ಎನ್.ಇಸ್ಮಾಯಿಲ್, ಇಬ್ರಾಹಿಂ ಕೊಣಾಜೆ, ಅಹ್ಮದ್ ಬಾವ ಪೆರಿಬೈಲ್, ಬಶೀರ್ ಮಹಮ್ಮದ್ ಅಜ್ಜಿನಡ್ಕ, ಆದಂ ಉಚ್ಚಿಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News