ಬೆಂಕಿ ಹಚ್ಚಿದ್ದ ದುಷ್ಕರ್ಮಿಗಳು: ಶೇ. 90ರಷ್ಟು ದೇಹ ಸುಟ್ಟರೂ ಸಹಾಯಕ್ಕಾಗಿ 1 ಕಿ.ಮೀ. ನಡೆದ ಅತ್ಯಾಚಾರ ಸಂತ್ರಸ್ತೆ

Update: 2019-12-05 17:02 GMT

ಉನ್ನಾವೊ, ಡಿ. 5: ಐವರು ದುಷ್ಕರ್ಮಿಗಳು ಹಚ್ಚಿದ ಬೆಂಕಿಯಿಂದ ಶೇ. 90 ಸುಟ್ಟು ಹೋದರೂ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ನೆರವಿಗಾಗಿ 1 ಕಿ.ಮೀ. ಕ್ರಮಿಸಿದ್ದಾರೆ ಎಂದು ವರದಿಯಾಗಿದೆ.

ಯುವತಿ ಮನೆಯ ಹೊರಗೆ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ಸಂಪರ್ಕಿಸಲು ನಡೆದುಕೊಂಡು ಹೋಗಿದ್ದಾರೆ ಹಾಗೂ ಅವರಿಂದ ನೆರವು ಕೋರಿದ್ದಾರೆ. ಅನಂತರ 112ಕ್ಕೆ ಕರೆ ಮಾಡಿ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕರೆಯ ಬಳಿಕವೇ ಪಿಆರ್‌ವಿ ಹಾಗೂ ಆ್ಯಂಬುಲೆನ್ಸ್ ಸ್ಥಳಕ್ಕೆ ಬಂತು ಎಂದು ಸಿಂಧುಪುರದ ಗ್ರಾಮ ನಿವಾಸಿಯೊಬ್ಬರು ಹೇಳಿದ್ದಾರೆ.

ಘಟನೆ ಬಗ್ಗೆ ಯುವತಿ ದಂಡಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ. ತನಗೆ ಬೆಂಕಿ ಹಚ್ಚಿದ ಐವರ ಹೆಸರನ್ನು ಹೇಳಿದ್ದಾರೆ. ‘‘ಐವರು ನನಗೆ ಥಳಿಸಿದರು. ಚೂರಿಯಿಂದ ಇರಿದರು ಹಾಗೂ ಬೆಂಕಿ ಹಚ್ಚಿದರು’’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಿಹಾರ್ ಪೊಲೀಸ್ ಠಾಣೆ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಸಿಂಧುಪುರದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ ಯುವತಿಯನ್ನು ಲಕ್ನೋದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News