ಮರಳು ಲಾರಿ ತಡೆದು ಸರಕಾರಿ ಕರ್ತವ್ಯಕ್ಕೆ ಅಡ್ಡಿ

Update: 2019-12-05 16:22 GMT

ಕುಂದಾಪುರ, ಡಿ.5: ಕಾನೂನು ಬದ್ದವಾಗಿ ಸರಕಾರಿ ಕೆಲಸಕ್ಕೆ ಮರಳನ್ನು ಸಾಗಿಸಲು ನೇಮಿಸಿದ್ದ ಲಾರಿಯನ್ನು ತಡೆದು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ರುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಕುಂದಾಪುರ ಉಪ ವಿಭಾಗದ ಸಹಾಯಕ ಇಂಜಿನಿಯರ್ ರಾಘವೇಂದ್ರ ನಾಯ್ಕ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಡಿ.3ರಂದು ಬಸ್ರೂರು ಗ್ರಾಮದ ಹಟ್ಟಿಕುದ್ರು ಎಂಬಲ್ಲಿ ವಶಪಡಿಸಿಕೊಂಡಿರುವ ಮರಳನ್ನು ಲೋಕೋಪಯೋಗಿ ಇಲಾಖೆಯ ವಶಕ್ಕೆ ನೀಡಿದ್ದರು. ಆ ಮರಳನ್ನು ನಿಯಮಾನುಸಾರ ಲೋಕೋಪಯೋಗಿ ಇಲಾಖೆಯ ಕೆಲಸಗಳಿಗೆ  ಬಳಸಲು ಕ್ರಮಕೈಗೊಂಡಿದ್ದರು.

ಅದರಂತೆ ಈ ಮರಳನ್ನು ಡಿ.4ರಂದು ಬೆಳಗ್ಗೆ ಸರಕಾರಿ ಕರ್ತವ್ಯಕ್ಕೆ ನೇಮಕ ಮಾಡಿರುವ ಲಾರಿಗೆ ತುಂಬಿಸಿ ಕೆರ್ಗಾಲ್ ಗ್ರಾಪಂನ ನಾಯ್ಕನಕಟ್ಟೆ ಎಂಬಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿಗೆ ಉಪಯೋಗಿಸಲು ಸಾಗಿಸಲಾಗುತ್ತಿತ್ತು. ಈ ವೇಳೆ ತಲ್ಲೂರು ಸಮೀಪ ಕರಿಯ ಪೂಜಾರಿ, ಸುದೇಶ ಶೆಟ್ಟಿ ಮತ್ತು ಇತರ 5-6 ಮಂದಿ ಲಾರಿಯನ್ನು ತಡೆದು ಚಾಲಕ ಸುನೀಲ್ ಎಂಬವರಿಗೆ ಅವಾಚ್ಯವಾಗಿ ನಿಂದಿಸಿದರು. ಬಳಿಕ ವಾಹನದ ತೂಕ ಮಾಡಲು ತಲ್ಲೂರು ವೇಬ್ರಿಡ್ಜ್‌ಗೆ ಲಾರಿಯನ್ನು ಬಲವಂತವಾಗಿ ತೆಗೆದುಕೊಂಡು ಹೋದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News