7ಕಿ.ಮೀ. ರಸ್ತೆಗಾಗಿ 1092 ಮರಗಳಿಗೆ ಕೊಡಲಿ ಏಟಿಗೆ ಸಿದ್ಧತೆ

Update: 2019-12-05 16:31 GMT

ಉಡುಪಿ, ಡಿ.5: ಬ್ರಹ್ಮಾವರ ತಾಲೂಕಿನ ಬ್ರಹ್ಮಾವರ- ಸೀತಾನದಿ ರಸ್ತೆ (ಬ್ರಹ್ಮಾವರದಿಂದ ಹೆಬ್ರಿ ಕಡೆಗೆ 7 ಕಿ.ಮೀ.)ಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಸಲುವಾಗಿ ರಸ್ತೆಯ ಇಕ್ಕೆಲಗಳಲ್ಲಿ ಕಾಮಗಾರಿಗೆ ಅಡಚಣೆ ಯಾಗಿರುವ ಸುಮಾರು 1092 ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ.

ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕರಣ 8(3) (VIII)ರಡಿ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದ್ದಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಡಿ.30ರಂದು ಅಪರಾಹ್ನ 3:00ಕ್ಕೆ ಉಡುಪಿ ವಲಯ ಅರಣ್ಯಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯಲಾಗಿದೆ.

ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಸಭೆಯಲ್ಲಿ ಹಾಜರಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಅಥವಾ ವೃಕ್ಷ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ ವಿಭಾಗ, ಕುಂದಾಪುರ ಇವರಿಗೆ ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಅಥವಾ ಇ-ಮೇಲ್ kpurforest@yahoo.com- ಅಂಚೆ ವಿಳಾಸ: ಉಪಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ, ಕುಂದಾಪುರ- 576201 ಇವರಿಗೆ ನಿಗದಿತ ದಿನದೊಳಗೆ ಆಕ್ಷೇಪಣೆಯನ್ನು ಸಲ್ಲಿಸಬಹುದು ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಪೆರ್ಡೂರು-ದೊಂಡರಂಗಡಿ: ಉಡುಪಿ ತಾಲೂಕಿನ ಪೆರ್ಡೂರು- ಹರಿಕಂಡಿಕೆ-ದೊಂಡರಂಗಡಿ ಜಿಲ್ಲಾ ಮುಖ್ಯ ರಸ್ತೆಯ ಸಾಂತ್ಯಾರು ಎಂಬಲ್ಲಿಂದ ಹರಿಕಂಡಿಕೆ ಜಂಕ್ಷನ್ ಮೂಲಕ ದೊಂಡರಂಗಡಿ-ಕೆ.ಜಿ.ರೋಡ್‌ವರೆಗಿನ ಮೂರು ಕಿ.ಮೀ ಹಳೆಯ ರಸ್ತೆಯನ್ನು ಅಗಲೀಕರಣಗೊಳಿಸಿ, ಚರಂಡಿಯನ್ನು ನಿರ್ಮಿಸುವ ಸಲುವಾಗಿ ರಸ್ತೆಯ ಮಧ್ಯಬಾಗದಿಂದ ಎರಡೂ ಬದಿ 6 ಮೀ. ಅಂತರದಲ್ಲಿ ರಸ್ತೆಯನ್ನು ಮಧ್ಯಮ ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಸಲುವಾಗಿ ರಸ್ತೆಯ ಇಕ್ಕೆಲಗಳಲ್ಲಿ ಕಾಮಗಾರಿಗೆ ಅಡಚಣೆ ಯಾಗಿರುವ 91 ಮರಗಳನ್ನು ಹಾಗೂ ಬ್ರಹ್ಮಾವರ ತಾಲೂಕು ಸೀತಾನದಿ-ಬ್ರಹ್ಮಾವರ ರಾಜ್ಯ ರಸ್ತೆಯ ನೀಲಾವರ ಕ್ರಾಸ್‌ನಿಂದ ಪೇತ್ರಿ ಬಸ್ ತಂಗುದಾಣದವರೆಗೆ ಅಂದಾಜು 4 ಕಿ.ಮೀ ದೂರದವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ರಸ್ತೆಯ ಇಕ್ಕೆಲಗಳಲ್ಲಿ ಕಾಮಗಾರಿಗೆ ಅಡಚಣೆಯಾಗಿರುವ 626 ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ.

ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕರಣದಡಿ ಇದಕ್ಕಾಗಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳಬೇಕಾಗಿ ರುವುದರಿಂದ ಜನವರಿ 6 ರಂದು ಅಪರಾಹ್ನ 3 ಗಂಟೆಗೆ ಹೆಬ್ರಿಯ ಹೆಬ್ರಿ ವಲಯ ಅರಣ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯಲಾಗಿದೆ.

ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಸಭೆಯಲ್ಲಿ ಹಾಜರಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಅಥವಾ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಇವರಿಗೆ ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಅಥವಾ kpurforest@yahoo.com- ವಿಳಾಸಕ್ಕೆ ಇ-ಮೇಲ್ ಮಾಡಬಹುದು ಎಂದು ಕುಂದಾಪುರ ವಿಭಾಗ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News