ಮೂಡುಬಿದಿರೆ : ವಿವಾಹಿತ ನಾಪತ್ತೆ

Update: 2019-12-05 17:21 GMT

ಮೂಡುಬಿದಿರೆ : ಕರಿಂಜೆ ಗ್ರಾಮದ ಕಲ್ಲಬೆಟ್ಟು ಸುವರ್ಣ ನಗರ ಮನೆಯ ತೌಸೀಫ್ ಅಹ್ಮದ್ (30) ಅವರು ಕಾಣೆಯಾಗಿದ್ದಾರೆಂದು ಅವರ ಪತ್ನಿ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಡಿ. 3 ರಂದು ಬೆಳಗ್ಗೆ 11 ಗಂಟೆಗೆ ಹೊರ ಹೋಗಿದ್ದ ತೌಸೀಫ್ ಮನೆಗೂ ವಾಪಸಾಗದೆ, ತನ್ನ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ ಎಂದು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಕಾಣೆಯಾದವರ ವಿವರ ಇಂತಿದೆ

ಎತ್ತರ: 5 ಅಡಿ 9 ಇಂಚು, ಗೋಧಿ ಮೈಬಣ್ಣ, ಉದ್ದ ಮುಖ, ಕಪ್ಪು ಕೂದಲು, ದೃಢಕಾಯ ಹೊಂದಿದ್ದು,  ಕ್ರೀಮ್ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಉದ್ದ ತೋಳಿನ ಅಂಗಿ ಧರಿಸಿದ್ದರು. ಕನ್ನಡ, ತುಳು, ಬ್ಯಾರಿ ಭಾಷೆ ಮಾತನಾಡುತ್ತಾರೆ.

ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬೇಕೆಂದು ಮೂಡುಬಿದಿರೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ. ಮೂಡುಬಿದಿರೆ ಪೊಲೀಸ್ ಠಾಣೆ: 08258-236333, ಪೊಲೀಸ್ ಇನ್ಸ್ ಪೆಕ್ಟರ್ ಮೂಡುಬಿದಿರೆ: 9480802314, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮೂಡುಬಿದಿರೆ: 9480805357, ಎಸಿಪಿ ಕಚೇರಿ ಪಣಂಬೂರು: 0824-2220526, ಪೊಲೀಸ್ ಆಯುಕ್ತರ ಕಚೇರಿ ಮಂಗಳೂರು: 0824-2220801, ಪೊಲೀಸ್ ಕಂಟ್ರೋಲ್ ರೂಮ್ ಮಂಗಳೂರು: 0824-2220800, 100 ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News