ಮೂಡುಬಿದಿರೆ : ರಸ್ತೆಗೆ ತುಳು ಲಿಪಿಯಲ್ಲಿ ನಾಮಕರಣ

Update: 2019-12-05 17:23 GMT

ಮೂಡುಬಿದಿರೆ : ಮನೆಗೆ, ಓಣಿಗೆ ಅಥವಾ ರಸ್ತೆಗಳಿಗೆ ಹೆಚ್ಚಾಗಿ ಕನ್ನಡ ಅಥವಾ ಇಂಗ್ಲಿಷ್‍ನಲ್ಲಿಯೇ ಹೆಸರುಗಳನ್ನು ಇಡುವ ನಾವು ತುಳುವಿನಲ್ಲಿ ಹೆಸರಿಡುವುದೇ...? ಎಂಬ ಸಂಶಯದ ನಡುವೆ ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಪಣಪಿಲದ ಜನತೆ ತಮ್ಮ ಊರಿನ ರಸ್ತೆಗೆ ತುಳು ಲಿಪಿಯಲ್ಲಿ ನಾಮಕರಣ ಮಾಡುವ ಮೂಲಕ  ಮಾತೃಭಾಷಾಭಿಮಾನವನ್ನು ಮೆರೆದಿದ್ದಾರೆ.

ಪಣಪಿಲದ ಗ್ರಾಮದ ರಸ್ತೆಯು ಪ್ರಪ್ರಥಮ ಬಾರಿಗೆ ಡಾಮರೀಕರಣ ಕಂಡಿದ್ದು ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ  ಅವರ ಗ್ರಾಮ ಸಡಕ್ ಯೋಜನೆಯಿಂದ. ಹಾಗಾಗಿ ಪಣಪಿಲದ ಪ್ರವೇಶ ರಸ್ತೆಗೆ " ಅಟಲ್ ಬಿಹಾರಿ ವಾಜಪೇಯಿ ರಸ್ತೆ" ಎಂದು ಗ್ರಾಮಸ್ಥರು ನಾಮಕರಣ ಮಾಡಿದ್ದಾರೆ. ವಿಶೇಷ ಎಂದರೆ ನಾಮಫಲಕದ ಬೋರ್ಡನ್ನು ಕನ್ನಡದೊಂದಿಗೆ ತುಳು ಲಿಪಿಯಲ್ಲಿ ಬರೆಯಲಾಗಿದೆ.

ತುಳು ಭಾಷೆಯಲ್ಲಿ ಬರೆಸಿರುವ ನಾಮಫಲಕವನ್ನು ಶಾಸಕ ಉಮಾನಾಥ ಕೋಟ್ಯಾನ್ ಅವರು ಇತ್ತೀಚೆಗೆ ಅನಾವರಣಗೊಳಿಸಿ ಗ್ರಾಮಸ್ಥರ ತುಳು ಭಾಷಾಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದರೆಗುಡ್ಡೆ ಗ್ರಾ.ಪಂ ಉಪಾಧಕ್ಷ ಮುನಿರಾಜ ಹೆಗ್ಡೆ ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News