ಡಾ.ನರಸಿಂಹ ಪೈಗೆ ಪ್ರೈಮ್‌ಐಕಾನ್ ಪ್ರಶಸ್ತಿ

Update: 2019-12-06 13:52 GMT

ಮಂಗಳೂರು, ಡಿ.6: ಇಲ್ಲಿನ ಕೆಎಂಸಿ ಆಸ್ಪತ್ರೆಯ ಖ್ಯಾತ ಹೃದಯ ಶಸಚಿಕಿತ್ಸಾ ತಜ್ಞ ಮತ್ತು ಸಹ ಪ್ರಾಧ್ಯಾಪಕರಾದ ಡಾ.ನರಸಿಂಹ ಪೈ ಅವರಿಗೆ ಹೃದಯ ರೋಗಶಾಸ ಕ್ಷೇತ್ರದಲ್ಲಿ ಅವರ ಕೊಡುಗೆಗಾಗಿ ಪ್ರತಿಷ್ಠಿತ ಪ್ರ್ತ್ರೈಮ್ ಟೈಮ್ ಐಕಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಈ ಪ್ರಶಸ್ತಿಯನ್ನು ಗೌರವಾನ್ವಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯಸಚಿವರಾದ ಅಶ್ವಿನಿ ಕುಮಾರ್ ಚೌಬೆ ಅವರು ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದ ಸಂಧರ್ಭದಲ್ಲಿ ನೀಡಿದರು. ಈ ಸಮಾರಂಭದಲ್ಲಿ ಸಂಸದ ಫ್ರೊೆಸರ್ ರೀಟಾ ಬಹುಗುಣ ಜೋಷಿ, ಉತ್ತರ ಪ್ರದೇಶದ ಯುವಜನ ಮತ್ತು ಕ್ರೀಡಾ ಸಚಿವ ಗೌರವಾನ್ವಿತ ಶ್ರೀ ಚೇತನ್ ಚೌಹಾಣ್ ಮತ್ತು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಶ್ಯಾಮ್‌ಜಾಜು ಅವರು ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ಡಾ.ನರಸಿಂಹ ಪೈ, ಸಮಾಜಕ್ಕೆ ಮರಳಿ ಕೊಡುಗೆ ನೀಡುವ ವಿಷಯದಲ್ಲಿ ನಾನು ಯಾವಾಗಲೂ ನಂಬಿಕೆ ಹೊಂದಿದ್ದೆ. ನನ್ನ ಬಳಿ ಇರುವ ಜ್ಞಾನದ ಜೊತೆಗೆ ಸಮುದಾಯಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಮತ್ತಷ್ಟು ಒತ್ತು ನೀಡುವುದಕ್ಕೆ ಈ ಪ್ರಶಸ್ತಿ ನನಗೆ ಪ್ರೋತ್ಸಾಹದಾಯಕವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News