2 ವರ್ಷಗಳಲ್ಲಿ ಉಬರ್ ಪ್ರಯಾಣ ವೇಳೆ 6,000 ಲೈಂಗಿಕ ದೌರ್ಜನ್ಯ ಘಟನೆಗಳು

Update: 2019-12-06 14:12 GMT
 ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಡಿ. 6: ಅಮೆರಿಕದಲ್ಲಿ 2017 ಮತ್ತು 2018ರಲ್ಲಿ ಉಬರ್ ವಾಹನಗಳಲ್ಲಿ 464 ಅತ್ಯಾಚಾರ ಪ್ರಕರಣಗಳು ಸೇರಿದಂತೆ ಸುಮಾರು 6,000 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ ಎಂದು ಕಂಪೆನಿಯು ಗುರುವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ತಿಳಿಸಿದೆ.

ಈ ಎರಡು ವರ್ಷಗಳ ಅವಧಿಯಲ್ಲಿ ಉಬರ್ ವಾಹನಗಳ ಪ್ರಯಾಣದ ವೇಳೆ 19 ಕೊಲೆಗಳೂ ಸಂಭವಿಸಿವೆ ಎಂದು ಅದು ಹೇಳಿದೆ.

ಈ ಮಾದರಿಯ ಅಂಕಿ-ಅಂಶಗಳನ್ನು ಉಬರ್ ಬಿಡುಗಡೆಗೊಳಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ಎರಡು ವರ್ಷಗಳಲ್ಲಿ 587 ಅತ್ಯಾಚಾರ ಯತ್ನ ಪ್ರಕರಣಗಳು ನಡೆದಿವೆ ಎಂದು ಉಬರ್ ವರದಿ ಹೇಳಿದೆ.

19 ಮಂದಿಯ ಕೊಲೆ

 ಎರಡು ವರ್ಷಗಳ ಅವಧಿಯಲ್ಲಿ, 18 ಘಟನೆಗಳಲ್ಲಿ 19 ಮಂದಿ ಹತ್ಯೆಗೀಡಾಗಿದ್ದಾರೆ. ಹತ್ಯೆಗೀಡಾದವರ ಪೈಕಿ 8 ಮಂದಿ ಪ್ರಯಾಣಿಕರು, 7 ಮಂದಿ ಚಾಲಕರು ಹಾಗೂ 4 ಮಂದಿ ಇತರರು ಎಂದು ಉಬರ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News