ಹಿಂದಿ ಪರೀಕ್ಷೆ : ಶಕ್ತಿ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

Update: 2019-12-06 14:20 GMT

ಮಂಗಳೂರು : ವಿದ್ಯಾರ್ಥಿಗಳ ಓದು ಕೇವಲ ತಮ್ಮ ತರಗತಿಯ ಪಾಠಗಳಿಗೆ ಮಾತ್ರ ಸೀಮಿತವಾಗಿರದೆ ಇತರ ಪುಸ್ತಕಗಳು, ದಿನ ಪತ್ರಿಕೆಯ ಓದಿ ಸಾಮಾನ್ಯ ಜ್ಞಾನವನ್ನು ತಿಳಿಯುವಂತಾಗಬೇಕು ಎಂದು ಶಕ್ತಿ ವಸತಿ ಶಾಲೆಯಲ್ಲಿ ನಡೆದ ಹಿಂದಿ ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಸ.ಪ್ರ.ದ.ಕಾ ಸುಳ್ಯದ ಸಹಾಯಕ ಪ್ರಾಧ್ಯಾಪಕ ರಾಮಕೃಷ್ಣ ಕೆ.ಎಸ್ ಹೇಳಿದರು.

ಭಾರತವು ಹಲವು ರಾಜ್ಯ, ಭಾಷೆ, ಜಾತಿ, ಧರ್ಮ, ಪಂಗಡಗಳನ್ನು ಹೊಂದಿದ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿದ ರಾಷ್ಟ್ರ. ಆದರೆ ಇಡೀ ವಿಶ್ವದಾದ್ಯಂತ ಎಲ್ಲರಿಗೂ ಅರ್ಥವಾಗುವ, ಮಾತನಾಡುವ ಭಾಷೆ ಹಿಂದಿ, ಆ ಭಾಷೆಯು 1 ನಿರ್ದಿಷ್ಟ ರಾಜ್ಯ ಭಾಷೆ ಪ್ರಾಂತ್ಯದ ಭಾಷೆ ಎಂಬ ಭಾವನೆ ಇರದೆ, ಭಾರತದ ಭಾಷೆ ಎಂಬ ಭಾವನೆಯನ್ನು ಹೊಂದಿರಬೇಕು. ಹಿಂದಿ ಪರೀಕ್ಷೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಮೊದಲಾದ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಸಿ ನಾಯ್ಕ್, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಕ್ಯಾತ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಸಲೋನಿ ನಿರೂಪಿಸಿದರು, ಆಸ್ತ ಕೋಟೆ ಸ್ವಾಗತಿಸಿ, ವಿದ್ಯಾರ್ಥಿ ಸಿದ್ಧಾಂತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News