ಆಯುಷ್ಮಾನ್ ಭಾರತ್: ಉಡುಪಿ ಜಿಲ್ಲೆಯಲ್ಲಿ 23.54 ಕೋಟಿ ರೂ. ಚಿಕಿತ್ಸೆ

Update: 2019-12-06 14:50 GMT

ಉಡುಪಿ, ಡಿ.6: ಬಡ ಹಾಗೂ ಮಧ್ಯಮ ವರ್ಗದ ಜನರಿಗೂ ಉಚಿತವಾಗಿ ಉತ್ತಮ ಆರೋಗ್ಯ ಸೇವೆ ದೊರಕಬೇಕೆನ್ನುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ‘ಆಯುಷ್ಮಾನ್ ಭಾರತ್’ ಯೋಜನೆಯನ್ನು ಪ್ರಸ್ತುತ ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ಸಂಯೋಜನೆಗೊಳಿಸಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 2018ರ ಅಕ್ಟೋಬರ್‌ನಿಂದ ಈ ವರ್ಷದ ಮಾರ್ಚ್‌ವರೆಗೆ ಒಟ್ಟು 1,791 ಫಲಾನುಭವಿ ಗಳು ಇದರ ಲಾಭ ಪಡೆದುಕೊಂಡಿದ್ದಾರೆ. ಪ್ರಸಕ್ತ ಸಾಲಿನ ನವೆಂಬರ್ ಅಂತ್ಯದವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 7,706 ಫಲಾನುಭವಿಗಳು 2354.13ಲಕ್ಷ ರೂ. (23.54ಕೋಟಿ ರೂ.) ಮೊತ್ತದ ಚಿಕಿತ್ಸೆಯನ್ನು ಪಡೆದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಕಾರ್ಕಳ ತಾಲೂಕಿನಲ್ಲಿ 1,436 ಫಲಾನುವಿಗಳಿಗೆ 394.76 ಲಕ್ಷ, ಕುಂದಾಪುರದಲ್ಲಿ 3257 ಫಲಾನುಭವಿಗಳಿಗೆ 1004.79 ಲಕ್ಷ ಮತ್ತು ಉಡುಪಿ ತಾಲೂಕಿನಲ್ಲಿ 3013 ಫಲಾನುಭವಿಗಳಿಗೆ 954.58 ಲಕ್ಷದಷ್ಟು ಮೊತ್ತದ ಚಿಕಿತ್ಸೆಯನ್ನು ನೀಡಲಾಗಿದೆ.

ರೆಪರಲ್ ಇಲ್ಲದೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 2550, ಕಾರ್ಕಳದಲ್ಲಿ 490 ಮತ್ತು ಕುಂದಾಪುರದಲ್ಲಿ 952 ಫಲಾನುಭವಿಗಳು ಸರ್ಜರಿ, ಮತ್ತಿತರ ವೈದ್ಯಕಿ ೀಯ ಚಿಕಿತ್ಸೆಯನ್ನು ಪಡೆದಿದ್ದಾರೆ.

ದ.ಕ ಜಿಲ್ಲೆಯಲ್ಲಿ ವೆನ್‌ಲಾಕ್, ಅಂಕೋಲಜಿ ಆಸ್ಪತ್ರೆ, ಎ.ಜೆ ಶೆಟ್ಟಿ ಮತ್ತು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೆ.ಎಂ.ಸಿ ಮಣಿಪಾಲ, ಆದರ್ಶ ಆಸ್ಪತ್ರೆ, ಪ್ರಸಾದ್ ನೇತ್ರಾಲಯ, ಹೈಟೆಕ್ ಆಸ್ಪತ್ರೆಗಳು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ರೆಪರಲ್ ವ್ಯವಸ್ಥೆ ಅಡಿ ನೋಂದಾಯಿಸಲ್ಪಟ್ಟಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಲ್ಯವಿಲ್ಲದ ಸೌಲ್ಯಗಳನ್ನು ಈ ಆಸ್ಪತ್ರೆಗಳಲ್ಲಿ ರೆಪರಲ್ ವ್ಯವಸ್ಥೆಯಡಿ ಪಡೆದುಕೊಳ್ಳಬಹುದು.

ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದೇ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಮುಖ್ಯ ಉದ್ದೇಶ. ಈ ಯೋಜನೆಯಡಿ ಚಿಕಿತ್ಸೆ ಪಡೆದುಕೊಂಡ ಫಲಾನುಭವಿಗಳ ಸಂಖ್ಯೆಯಲ್ಲಿ ಉಡುಪಿ ಜಿಲ್ಲಾಸ್ಪತ್ರೆಯು ರಾಜ್ಯದಲ್ಲಿ ಎಂಟನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಇದುವರೆಗೆ ಮೂರು ಲಕ್ಷಕ್ಕೂ ಮಿಕ್ಕಿ ಆಯುಷ್ಮಾನ್ ಎಬಿ-ಎಆರ್‌ಕೆ ಕಾರ್ಡ್ ವಿತರಣೆ ಮಾಡಲಾಗಿದೆ. ಕಾರ್ಡ್ ವಿತರಣೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ ಎಂದು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News