ಡಿ. 7: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ನಲ್ಲಿ ವಿಶ್ವವಜ್ರ ಪ್ರದರ್ಶನ, ಮಾರಾಟಕ್ಕೆ ಚಾಲನೆ

Update: 2019-12-06 17:18 GMT

ಮಂಗಳೂರು, ಡಿ. 6: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಸಂಸ್ಥೆಯ 7ನೇ ವರ್ಷದ ‘ವಿಶ್ವವಜ್ರ ಪ್ರದರ್ಶನ ಮತ್ತು ಮಾರಾಟ’ ಉತ್ಸವಕ್ಕೆ ಡಿ.7ರಂದು ಚಾಲನೆ ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ದಕ್ಷಿಣ ಭಾರತದ ಬೃಹತ್ ವಜ್ರ ಪ್ರದರ್ಶನಕ್ಕೆ ಡಿ. 7ರಂದು ಸಂಜೆ 4:30ಕ್ಕೆ ನಿಟ್ಟೆ ವಿವಿಯ ಚಾನ್ಸಲರ್ ಡಾ. ವಿನಯ್ ಹೆಗ್ಡೆ ಚಾಲನೆ ನೀಡಲಿದ್ದಾರೆ. ಮಂಗಳೂರಿನ ಕಂಕನಾಡಿ ಬೈಪಾಸ್ ರಸ್ತೆಯ ಬಳಿ ಇರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ ಪ್ರಥಮ ಮಹಡಿಯಲ್ಲಿ ಡಿ.7ರಿಂದ ಡಿ.22ರವರೆಗೆ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.

ಮಾಜಿ ಎಂಎಲ್‌ಸಿ ಹಾಗೂ ಮುಸ್ಲಿಂ ಸೆಂಟ್ರಲ್ ಸಮಿತಿ ದ.ಕ ಮತ್ತು ಉಡುಪಿಯ ಅಧ್ಯಕ್ಷ ಕೆಎಸ್ ಮಹಮ್ಮದ್ ಮಸೂದ್, ಮಿಸ್ಬಾ ವುಮೆನ್ಸ್ ಕಾಲೇಜಿನ ಅಧ್ಯಕ್ಷೆ ಮುಮ್ತಾಝ್ ಅಲಿ, ವಿಶ್ವಾಸ್ ಬಾವ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ, ಆಝಾದ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಮನ್ಸೂರ್ ಅಹ್ಮದ್ ಆಝಾದ್, ಶಾಲಿಮಾರ್ ಬಿಲ್ಡರ್‌ನ ಆಡಳಿತ ನಿರ್ದೇಶಕ ಅಬ್ದುಲ್ ರಹೀಂ, ಜಿಬಿ ಕನ್‌ಸ್ಟ್ರಕ್ಷನ್‌ನ ಆಡಳಿತ ನಿರ್ದೇಶಕ ಗಣೇಶ್ ಬಂಗೇರಾ, ಫಾತಿಮಾ ಟ್ರೇಡರ್ಸ್‌ನ ವ್ಯವಸ್ಥಾಪಕ ಪಾಲುದಾರ ಅಹ್ಮದ್ ಶರೀಫ್, ಮುಕ್ಕ ಸೀ ಫುಡ್‌ ನಿರ್ದೇಶಕ ಹಶೀರ್, ಇನ್ನರ್‌ವ್ಹೀಲ್ ಜಿಲ್ಲೆ 318ರ ಮಾಜಿ ಚೇರ್‌ಮ್ಯಾನ್ ಶಮೀಮ್ ಕುನಿಲ್, ಕಾಸರಗೋಡು ಎನ್‌ಎ ಮೋಡೆಲ್ ಸ್ಕೂಲ್‌ನ ಹಸೀನಾ ನೌಫಾಲ್, ಬೃಂದಾವನ್ ನ್ಯಾಚುರೋಪತಿಯ ಡಾ ಶಾರದಾ ಬಂಗೇರಾ, ಹಲೀಮಾ ಶಹೀನ್, ಶಿರೀನ್ ಫಾತಿಮಾ, ‘ರೊಮ್ಯಾಂಟಿಕ್’ನ ಮಾಲಕಿ ಫಿಲೋಮಿನಾ, ಸಾಮಾಜಿಕ ಕಾರ್ಯಕರ್ತೆ ಪೂರ್ಣಿಮಾ ಶೆಣೈ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ ಎಂದು ಸುಲ್ತಾನ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ ಟಿಎಂ ಅಬ್ದುಲ್ ರವೂಫ್ ತಿಳಿಸಿದ್ದಾರೆ.

ವಿವಿಧ ವಿನ್ಯಾಸಗಳ ಸಾಲಿಟೇರ್ ಸಂಗ್ರಹ, ಕ್ಲೋಸ್ ಸೆಟ್ಟಿಂಗ್ ವಜ್ರಾಭರಣ ಹಾಗೂ ತನ್ಮೇನಿಯಾ ಸಂಗ್ರಹದ ಬೃಹತ್ ಸಂಗ್ರಹವಿದ್ದು, ಮದುಮಗಳ ವಜ್ರಾಭರಣಗಳ ಅತ್ಯಾಧುನಿಕ ವಿನ್ಯಾಸಗಳ ಸಹಿತ ವಿವಿಧ ವಜ್ರಾಭರಣಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗುವುದು. ಮುಂಬೈಯ ವಜ್ರ ತಜ್ಞರು ಡೈಮಂಡ್ ಗೈಂಡಿಂಗ್ ಯಂತ್ರದ ಮೂಲಕ ಗ್ರಾಹಕರಿಗೆ ವಜ್ರದ ಕುರಿತು ಮಾಹಿತಿ ನೀಡಲಿದ್ದಾರೆ. ಅಲ್ಲದೆ ಯಾವುದೇ ಅಂಗಡಿಗಳಲ್ಲಿ ಖರೀದಿಸಿದ ವಜ್ರದ ಗುಣಮಟ್ಟವನ್ನು ಇಲ್ಲಿ ಉಚಿತವಾಗಿ ಪರೀಕ್ಷಿಸಬಹುದು ಎಂದವರು ಹೇಳಿದ್ದಾರೆ.

ಪ್ರದರ್ಶನ ಮತ್ತು ಮಾರಾಟದ ಅವಧಿಯಲ್ಲಿ ಗ್ರಾಹಕರು ಪ್ರತೀ ಡೈಮಂಡ್ ಕ್ಯಾರಟ್‌ನ ಮೇಲೆ 7,000 ರೂ. ಡಿಸ್ಕೌಂಟ್ ಪಡೆಯಬಹುದು ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಟಿಎಂ ಅಬ್ದುಲ್ ರಹೀಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News