ಲಂಕಾ ಪ್ರತಿಪಕ್ಷ ನಾಯಕರಾಗಿ ಪ್ರೇಮದಾಸ ನೇಮಕ

Update: 2019-12-06 15:08 GMT
ಫೋಟೋ ಕೃಪೆ: twitter.com/sajithpremadasa/header_photo

ಕೊಲಂಬೊ, ಡಿ. 6: ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಗೋತಬಯ ರಾಜಪಕ್ಸ ವಿರುದ್ಧ ಸೋಲನುಭವಿಸಿದ ಯುನೈಟೆಡ್ ನ್ಯಾಶನಲ್ ಪಾರ್ಟಿ (ಯುಎನ್‌ಪಿ)ಯ ನಾಯಕ ಸಜಿತ್ ಪ್ರೇಮದಾಸರನ್ನು ಗುರುವಾರ ದೇಶದ ಸಂಸತ್ತಿನ ಪ್ರತಿಪಕ್ಷ ನಾಯಕರನ್ನಾಗಿ ನೇಮಿಸಲಾಗಿದೆ.

ಗುರುವಾರ ನಡೆದ ಪಕ್ಷದ ಸಂಸದೀಯ ಸಮಿತಿಯ ಸಭೆಯ ಬಳಿಕ, 52 ವರ್ಷದ ಪ್ರೇಮದಾಸರನ್ನು ತನ್ನ ಸ್ಥಾನದಲ್ಲಿ ಪ್ರತಿಪಕ್ಷ ನಾಯಕರಾಗಿ ನೇಮಿಸಲು ಪಕ್ಷದ ನಾಯಕ ಹಾಗೂ ಮಾಜಿ ಪ್ರಧಾನಿ ರನಿಲ್ ವಿಕ್ರಮೆಸಿಂೆ ಒಪ್ಪಿಕೊಂಡರು.

70 ವರ್ಷದ ವಿಕ್ರಮೆಸಿಂಘೆ ಸ್ವಲ್ಪ ಅವಧಿಯನ್ನು ಹೊರತುಪಡಿಸಿ, 1994ರಿಂದ ನಿರಂತರವಾಗಿ ಪ್ರತಿಪಕ್ಷ ನಾಯಕನ ಸ್ಥಾನವನ್ನು ವಹಿಸಿದ್ದರು. 2001ರಿಂದ 2004 ಮತ್ತು 2015ರಿಂದ ಈ ವರ್ಷದ ನವೆಂಬರ್‌ವರೆಗೆ ಅವರು ಎರಡು ಬಾರಿ ಪ್ರಧಾನಿಯಾಗಿದ್ದರು.

ನವೆಂಬರ್ 16ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋತಬಯ ರಾಜಪಕ್ಸ ವಿರುದ್ಧ ಸಜಿತ್ ಪ್ರೇಮದಾಸ ಸೋಲನುಭವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News