ಡಿ.8ರಂದು ಉಳ್ಳಾಲದಲ್ಲಿ ಕೌಟುಂಬಿಕ ರಕ್ತದಾನ ಶಿಬಿರ

Update: 2019-12-06 15:30 GMT

ಉಳ್ಳಾಲ, ಡಿ.6: ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಮತ್ತು ಎಂಕೆ ಫ್ಯಾಮಿಲಿ ಗ್ರೂಪ್ ಜಂಟಿ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಬಾರಿಗೆ ಕೌಟುಂಬಿಕ ರಕ್ತದಾನ ಶಿಬಿರವು ಉಳ್ಳಾಲದಲ್ಲಿ ಡಿ.8 ರಂದು ನಡೆಯಲಿದೆ.

ಕುಟುಂಬದ ಸದಸ್ಯರನ್ನು ಒಂದೆಡೆ ಒಗ್ಗೂಡಿಸುವ ನಿಟ್ಟಿನಲ್ಲಿ ಸ್ಥಾಪಿಸಲಾದ ಎಂಕೆ ಫ್ಯಾಮಿಲಿ ಗ್ರೂಪ್ ಕುಟುಂಬದ ಹಲವಾರು ಹೆಣ್ಣು ಮಕ್ಕಳ ಮದುವೆಗೆ ನೆರವು ನೀಡುತ್ತಿದೆ. ಅದರೊಂದಿಗೆ ಈ ಬಾರಿ ಫ್ಯಾಮಿಲಿ ಗ್ರೂಪ್ ವಿಭಿನ್ನ ಪ್ರಯತ್ನವೊಂದಕ್ಕೆ ಕೈ ಹಾಕಿದ್ದು, ಕುಟುಂಬ ಸದಸ್ಯರಿಗೆ ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಹಾಗೂ ರಕ್ತದಾನ ಮಾಡಲು ಉತ್ತೇಜಿಸುವ ಸಲುವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲು ತೀರ್ಮಾನಿಸಿದೆ.

ರಕ್ತದಾನ ಶಿಬಿರವು ಡಿ.8 ರಂದು ಉಳ್ಳಾಲ ಅಳೇಕಲದ ಎಂಕೆ ಹೌಸ್ ವಠಾರದಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಕೆಎಂಸಿ ರಕ್ತನಿಧಿ ಮಂಗಳೂರು ಇದರ ಸಹಯೋಗದೊಂದಿಗೆ ನಡೆಯಲಿದ್ದು, ಕುಟುಂಬದ ಹಿರಿಯರಾದ ಮರ್ಹೂಂ ಅಬ್ದುಲ್ ಖಾದರ್, ಮರ್ಹೂಂ ಅವ್ವಮ್ಮ ಹಾಗೂ ಮರ್ಹೂಂ ಮುಹಮ್ಮದ್ ಬಿ ಇವರ ಸ್ಮರಣಾರ್ಥವಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News