ತಾಂತ್ರಿಕ ಯುಗದಲ್ಲಿ ಕಲಾವಿದರು ಅಳಿದರೂ ಅವರ ಕಲೆ ನಮ್ಮೊಂದಿಗೆ ಇರುತ್ತದೆ: ಡಾ.ಡಿ.ವೀರೇಂದ್ರ ಹೆಗ್ಗಡೆ

Update: 2019-12-06 15:47 GMT

ಮಂಗಳೂರು, ಡಿ. 6: ಇಂದಿನ ತಾಂತ್ರಿಕ ಯುಗದಲ್ಲಿ ಕಲಾವಿದರ ಭೌತಿಕ ದೇಹ ಅಳಿದರು ಅವರು ನೀಡಿದ ಕಲೆ ನಮ್ಮೊಂದಿಗಿರು ತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ದಿ. ಕದ್ರಿ ಗೋಪಾಲ ನಾಥ್‌ರವರ ಸ್ಮರಣಾರ್ಥ ಅವರ ಕುಟುಂಬದ ಸದಸ್ಯರು, ಅಭಿಮಾನಿಗಳು ಹಾಗೂ ಜಿಲ್ಲಾಡಳಿತ ಇದರ ಸಹಯೋಗದೊಂದಿಗೆ ನಗರದ ಪುರಭವನದಲ್ಲಿಂದು ಹಮ್ಮಿಕೊಂಡ ಕದ್ರಿ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರಾಚೀನ ಕಾಲದಲ್ಲಿ ಕಲಾವಿದರ ಲಾ ಪ್ರತಿಭೆಯನ್ನು ದಾಖಲಿಸಿ ಮತ್ತೊಮ್ಮೆ ಕೇಳುವ ನೊಡುವ ತಾಂತ್ರಿಕತೆ ಬೆಳೆದಿರಲಿಲ್ಲ. ಆದರೆ ಈಗ ಹಾಗಿಲ್ಲ. ಡಿಜಿಟಲ್ ಯುಗದಲ್ಲಿ ತಾಂತ್ರಜ್ಞಾನದ ಕೊಡುಗೆಯಿಂದ ಅವರ ಕಲಾಪ್ರತಿಭೆಯನ್ನು ಮತ್ತೆ ಕೇಳುವ, ನೋಡುವ ಅವಕಾಶ ಸಕಷ್ಟು ವರ್ಷ ಕಳೆದರೂ ಇರುವುದರಿಂದ ಕಲಾವಿದರಿಗೆ ಸಾವಿಲ್ಲ ಎನ್ನಬಹುದು. ಕದ್ರಿ ಗೊಪಾಲನಾಥ್ ಅಂತಹ ಸಾವಿಲ್ಲದ ಸದಾ ಜೀವನೋತ್ಸಹದಿಂದ ಇದ್ದ ಮಹಾನ್ ಕಲಾವಿದ. ಮಂಗಳೂರಿನ ಪ್ರದೇಶದಲ್ಲಿ ಹುಟ್ಟಿ ದೇಶ, ವಿದೇಶದ ಮಹಾನ್ ಕಲಾವಿದರ ಸಾಲಿನಲ್ಲಿ ಕುಳಿತು ತನ್ನ ಸ್ವಾ ಸಾಮರ್ಥ್ಯದಿಂದ ಕಲಾ ಪ್ರೌಡಿಮೆಯನ್ನು ಮೆರೆದ ಕಲಾವಿದ. ಭಾರತೀಯ ಕಲೆಯ ಬಗ್ಗೆ ತಾತ್ಸರದ ಭಾವನೆ ಬೆಳೆದು ಬಂದ ಕಾಲದಲ್ಲಿ ಅವರು ದೇಶ ವಿದೇಶಗಳಲ್ಲಿ ಕಲೆಯನ್ನು ಪಸರಿಸಿದ್ದಾರೆ. ಇತ್ತೀಚಿನ ಕೆಲವು ದಶಕಗಳಲ್ಲಿ ಮತ್ತೆ ದೇಶೀಯ ಕಲೆಗಳು ಜಗತ್ತಿನ ಇತರ ದೇಶಗಳಲ್ಲೂ ಮಾನ್ಯತೆ ಪಡೆಯುವುದಕ್ಕೆ ಆರಂಭವಾಗಿದೆ ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ,ಶಾಸಕ ವೇದವ್ಯಾಸ ಕಾಮತ್, ಕ್ಯಾತ ಕಲಾವಿದ ಟಿ.ವಿ ಗೋಪಾಲಕೃಷ್ಣನ್, ಗೋಮತಿದಾಸ್ ಚೆನ್ನೈ, ಸ್ಮಾರ್ಟ್ ಸಿಟಿ ಮಂಗಳೂರು ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಹಮ್ಮದ್ ನಝೀರ್, ಲಂಡನ್‌ನ ಲೇಖಕಿ ಕ್ಯಾಂಡಿದ ಕೊನೋಲಿ, ಮಣಿಕಾಂತ್ ಕದ್ರಿ ಮೊದಲಾದವರು ಉಪಸ್ಥಿತರಿದ್ದರು. ನಿತ್ಯಾನಂದ ರಾವ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News