ಐಪಿಎಸ್ ಅಧಿಕಾರಿ ಕೆ. ವಿಜಯ ಕುಮಾರ್ ಗೃಹ ಸಚಿವಾಲಯದ ಹಿರಿಯ ಭದ್ರತಾ ಅಧಿಕಾರಿಯಾಗಿ ನಿಯೋಜನೆ

Update: 2019-12-06 15:58 GMT

ಹೊಸದಿಲ್ಲಿ, ಡಿ. 6: ಈ ಹಿಂದಿನ ಜಮ್ಮು ಹಾಗೂ ಕಾಶ್ಮೀರದ ರಾಜ್ಯಪಾಲರಿಗೆ ಇತ್ತೀಚೆಗಿನ ವರೆಗೆ ಸಲಹೆಗಾರರಾಗಿದ್ದ ಕೆ. ವಿಜಯ್ ಕುಮಾರ್ ಗೃಹ ಸಚಿವಾಲಯದ ಹಿರಿಯ ಭದ್ರತಾ ಸಲಹೆಗಾರರಾಗಿ ಮಂಗಳವಾರ ನಿಯೋಜಿತರಾಗಿದ್ದಾರೆ.

 ಕುಮಾರ್ ಅವರು ನಿವೃತ್ತ ಐಪಿಎಸ್ ಅಧಿಕಾರಿ. 1975ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ವಿಜಯ್ ಕುಮಾರ್ ಜಮ್ಮು ಹಾಗೂ ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳ ಭದ್ರತೆಗೆ ಹಾಗೂ ಎಡಪಂಥೀಯ ಉಗ್ರವಾದ ಪೀಡಿತ ರಾಜ್ಯಗಳಿಗೆ ಸಂಬಂಧಿಸಿ ಗೃಹ ಸಚಿವಾಲಯಕ್ಕೆ ಸಲಹೆ ನೀಡಲಿದೆ ಎಂದು ಕೇಂದ್ರ ಸರಕಾರದ ಆದೇಶ ಹೇಳಿದೆ. ಅಧಿಕಾರ ಸ್ವೀಕರಿಸಿದ ದಿನಾಂಕದಿಂದ ಒಂದು ವರ್ಷಗಳ ಕಾಲ ಅವರು ಸಚಿವಾಲಯದ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅದು ತಿಳಿಸಿದೆ.

ಕುಮಾರ್ ಅವರು ಕೇಂದ್ರ ಮೀಸಲು ಪೊಲೀಸ್ ಪಡೆಯ ಪ್ರಧಾನ ನಿರ್ದೇಶಕರಾಗಿ ಹಾಗೂ ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 2004ರಲ್ಲಿ ದಂತಚೋರ ವೀರಪ್ಪನ್‌ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ನಡೆಸಿದ ತಮಿಳುನಾಡಿನ ವಿಶೇಷ ಕಾರ್ಯ ಪಡೆಯ ನೇತೃತ್ವವನ್ನು ಅವರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News