ಚೀನಾಕ್ಕೆ ಯಾಕೆ ಸಾಲ ಕೊಡುತ್ತೀರಿ? ಅವರಲ್ಲಿ ಬೇಕಾದಷ್ಟು ಹಣ ಇದೆ: ಟ್ರಂಪ್

Update: 2019-12-07 16:11 GMT

ವಾಶಿಂಗ್ಟನ್, ಡಿ. 7: ಚೀನಾಕ್ಕೆ ಸಾಲ ನೀಡಲು ವಿಶ್ವ ಬ್ಯಾಂಕ್ ಮುಂದಾಗಿರುವುದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಬ್ಯಾಂಕನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘‘ವಿಶ್ವ ಬ್ಯಾಂಕ್ ಚೀನಾಕ್ಕೆ ಯಾಕೆ ಹಣ ಸಾಲ ನೀಡುತ್ತಿದೆ? ಇದು ಸಾಧ್ಯವೇ? ಚೀನಾ ಬೇಕಾದಷ್ಟು ಹಣವನ್ನು ಹೊಂದಿದೆ. ಒಂದು ವೇಳೆ, ಇಲ್ಲದಿದ್ದರೆ ಅವರೇ ಹಣವನ್ನು ಸೃಸ್ಟಿಸುತ್ತಾರೆ. ನಿಲ್ಲಿಸಿ!’’ ಎಂಬುದಾಗಿ ಟ್ರಂಪ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ವಿಶ್ವಬ್ಯಾಂಕ್‌ನ ಈಗಿನ ಅಧ್ಯಕ್ಷರಾಗಿರುವ ಡೇವಿಡ್ ಮ್ಯಾಲ್ಪಾಸ್ ಅಮೆರಿಕ ಸರಕಾರದ ಖಜಾನೆ ಇಲಾಖೆ ಅಧಿಕಾರಿಯಾಗಿದ್ದ ಅವಧಿ ಸೇರಿದಂತೆ, ಸುದೀರ್ಘ ಅವಧಿಯಿಂದ ಅಮೆರಿಕ ಆಡಳಿತವು ಚೀನಾಕ್ಕೆ ಸಾಲ ನೀಡುವ ವಿಷಯದಲ್ಲಿ ಇದೇ ನಿಲುವನ್ನು ಹೊಂದಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ವಿಶ್ವಬ್ಯಾಂಕ್ ಚೀನಾಕ್ಕೆ ಸಾಲ ನೀಡುವ ವಿಷಯದಲ್ಲಿ ಇದೇ ರೀತಿಯ ನಿಲುವನ್ನು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್ ಹೊಂದಿದ್ದಾರೆ. ಗುರುವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸಮಿತಿಯೊಂದರ ಸಮ್ಮುಖದಲ್ಲಿ ಸಾಕ್ಷ್ಯ ನೀಡಿದ ಅವರು, ಚೀನಾಕ್ಕೆ ಹಲವು ವರ್ಷಗಳ ಅವಧಿಗೆ ಸಾಲ ನೀಡುವುದನ್ನು ಮತ್ತು ಚೀನಾದಲ್ಲಿನ ಯೋಜನೆಗಳಿಗೆ ಆರ್ಥಿಕ ನೆರವು ನೀಡುವುದನ್ನು ಅಮೆರಿಕ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News