ಕಾಪು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಅಹ್ವಾನ

Update: 2019-12-07 16:23 GMT

ಶಿರ್ವ, ಡಿ.7: ಮೂಡುಬೆಳ್ಳೆ ಸಂತ ಲಾರೆನ್ಸ್ ದೇವಾಲಯದ ಸೌಹಾರ್ದ ಭಾಭವನದಲ್ಲಿ ಡಿ.17ರಂದು ನಡೆಯುವ ಕಾಪು ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಅವರಿಗೆ ಕಸಾಪ ಕಾಪು ತಾಲೂಕು ಘಟಕ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯಿಂದ ಕುಂಜೂರಿನಲ್ಲಿ ರುವ ಅವರ ನಿವಾಸದಲ್ಲಿ ಅಧಿಕೃತ ಅ್ವಾನ ಪತ್ರ ನೀಡಿ ಆಮಂತ್ರಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ರಾಜ್ಯದಲ್ಲಿ ಈ ಸಾಲಿನ ಪ್ರಪ್ರಥಮ ತಾಲೂಕು ಸಾಹಿತ್ಯ ಸಮ್ಮೇಳನ ಬಿಂದುವಿನಲ್ಲಿ ಪ್ರತಿಬಿಂಬ ಪರಿಕಲ್ಪನೆಯೊಂದಿಗೆ ಕಾಪು ತಾಲೂಕಿನಿಂದ ಆರಂಭಗೊಳ್ಳುತ್ತಿದ್ದು, ಸಮ್ಮೇಳನ ಯಶಸ್ವಿ ಗೊಳಿಸುವ ನಿಟ್ಟಿನಲ್ಲಿ ತಾಲೂಕು ಘಟಕ ಹಾಗೂ ಮೂಡು ಬೆಳ್ಳೆಯ ಸರ್ವ ನಾಗರಿಕರನ್ನು ಒಳಗೊಂಡ ಸ್ವಾತ ಸಮಿತಿ ಸನ್ನದ್ದವಾಗಿದೆ ಎಂದರು.

ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಂಗೇರಿ ದೇವದಾಸ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಸಾಪ ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಜಿಲ್ಲಾ ಸಮಿತಿಯ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಉಪಾಧ್ಯಕ್ಷ ಪಿ.ಡಿ.ಕಾಮತ್, ತಾಪಂ ಸದಸ್ಯೆ ಸುಜಾತಾ ಸುವರ್ಣ, ಜಿಪಂ ಮಾಜಿ ಅಧ್ಯಕ್ಷ ಜೆರಾಲ್ಡ್ ಫೆರ್ನಾಂಡಿಸ್, ಉದ್ಯಮಿ ಎ.ಕೆ.ಆಲ್ವಾ, ಗ್ರಾಪಂ ಸದಸ್ಯ ಸುಧಾಕರ ಪೂಜಾರಿ, ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಪದ್ಮನಾಭ ನಾಯಕ್, ಐವನ್ ದಲ್ಮೇದಾ, ಬ್ರಹ್ಮಾವರ ಕಸಾಪ ಅಧ್ಯಕ್ಷ ನಾರಾಯಣ ಮಡಿ, ಕಸಾಪ ಕಾಪು ತಾಲೂಕು ಗೌರವ ಕಾರ್ಯದರ್ಶಿಗಳಾದ ವಿದ್ಯಾಧರ್ ಪುರಾಣಿಕ್, ವಿದ್ಯಾ ಅಮ್ಮಣ್ಣಾಯ, ಕೋಶಾಧಿಕಾರಿ ಎಸ್.ಎಸ್.ಪ್ರಸಾದ್, ಸದಸ್ಯರುಗಳಾದ ಡಾ.ಪ್ರಜ್ಞಾ ಮಾರ್ಪಳ್ಳಿ, ಹರೀಶ್ ಕಟ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News