​ಹಳೆಯಂಗಡಿ ಅಬ್ದುಲ್ಲಾ ಉಸ್ತಾದ್ ನಿಧನ

Update: 2019-12-07 16:28 GMT

ಹಳೆಯಂಗಡಿ: ಇಲ್ಲಿನ ಇಂದಿರಾನಗರ ನಿವಾಸಿ ಅಬ್ದುಲ್ಲಾ ಉಸ್ತಾದ್ (50) ಶುಕ್ರವಾರ ರಾತ್ರಿ ಹೃದಯಾಘಾತಕ್ಕೆ ಒಳಗಾಗಿ ಮಂಗಳೂರಿನ ಖಾಸಗಿ ಆಸ್ಪತೆಯಲ್ಲಿ ನಿಧನರಾದರು.

ಅವರು ಅಲ್ ಮದ್ರಸತುಲ್ ಖಿಳ್‌ರಿಯ ಇಂದಿರಾನಗರದಲ್ಲಿ ಸುಮಾರು 16 ವರ್ಷಗಳ ಕಾಲ ಅಧ್ಯಾಪಕರಾಗಿ, ಹಿಮಾಯತುಲ್ ಇಸ್ಲಾಂ ಮದರಸ ಸಂತೆಕಟ್ಟೆ ಹಳೆಯಂಗಡಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆಗೈದಿದ್ದಾರೆ. ಅಲ್ಲದೆ, ದಫ್ ಉಸ್ತಾದ್ ಆಗಿಯೂ ಸೇವೆ ಸಲ್ಲಿಸಿರುವ ಇವರು ಅಪಾರ ಶಿಷ್ಯಂದಿರನ್ನು ಹೊಂದಿದ್ದಾರೆ.

ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಬೊಳ್ಳೂರು ಇದರ ಸ್ಥಾಪಕ ಅಧ್ಯಕ್ಷರಾಗಿ, ಅಲ್ ಮದ್ರಸತುಲ್ ಖಿಳ್‌ರಿಯಾ ಇಂದಿರಾನಗರ ಇದರ ಕಾರ್ಯದರ್ಶಿಯಾಗಿ, ಎಸ್ಕೆಎಸ್ಸೆಸೆಫ್ ಹಳೆಯಂಗಡಿ ಯೂನಿಟ್‌ನ ಸಕ್ರೀಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದು ಉತ್ತಮ ಗುಣ ಸ್ವಭಾವ ಹೊಂದಿದ್ದರು.

ಮೃತರು ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿ, ಬಂದು ಮಿತ್ರರು ಸೇರಿದಂತೆ ಅಪಾರ ಶಿಷ್ಯಂದಿರನ್ನು ಅಗಲಿದ್ದಾರೆ. ಮೃತರ ಮನೆಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಭೇಟಿ ನೀಡಿ ಸಾಂತ್ವನ ಹೇಳಿದರು.

ಸಂತಾಪ: ದ.ಕ. ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಅಝ್‌ಹರ್ ಫೈಝಿ ಬೊಳ್ಳೂರು ಉಸ್ತಾದ್, ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಎಸ್ಕೆಎಸ್ಸೆಸೆಫ್ ಹಳೆಯಂಗಡಿ ಘಟಕ, ಎಸ್ಕೆಎಸ್ಸೆಸೆಫ್‌ ಬೊಳ್ಳೂರು ಘಟಕ, ವಿಖಾಯ ಟೀಮ್, ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಬೊಳ್ಳೂರು, ಖಿಳ್‌ರಿಯಾ ಹಳೆ ವಿದ್ಯಾರ್ಥಿಗಳ ವೇದಿಕೆ ಇಂದಿರಾನಗರ ಸೇರಿದಂತೆ ಹಲವು ಸಂಘ ಸಂಸ್ಥೆಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News