ಭಟ್ಕಳ: ಕಸ ಎಸೆಯಬೇಡಿ ಎಂಬ ಎಚ್ಚರಿಕೆಯ ಫಲಕದ ಮುಂದೆಯೆ ತ್ಯಾಜ್ಯ ಎಸೆತ

Update: 2019-12-07 17:18 GMT

ಭಟ್ಕಳ: ಪುರಸಭೆಯವರ ಎಚ್ಚರಿಕೆ ಫಲಕದ ಮುಂದೆಯೇ ಕಸ ಎಸೆದು ಹೋಗಿರುವ ಘಟನೆ ಶುಕ್ರವಾರ ರಾತ್ರಿ ಪುರಸಭೆಯ ವ್ಯಾಪ್ತಿಯ ಕೋಕ್ತಿಕೆರೆ ಬಳಿ ನಡೆದಿದ್ದು ಕಸ ಎಸೆಯುವವರ ವಿರುದ್ಧ ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ಸ್ಥಳದಲ್ಲಿ ಕಸ ಎಸೆಯುವು ನಿಷೇಧಿಸಲಾಗಿದೆ. ತಪ್ಪಿದ್ದಲ್ಲಿ ದಂಡ ವಿಧಿಸಲಾಗುವುದು’ ಎಂಬ ಎಚ್ಚರಿಕೆಯ ಫಲಕವನ್ನು ನಿರ್ಲಕ್ಷಿಸಿ ರಾತ್ರಿ ತ್ಯಾಜ್ಯ ವಸ್ತುಗಳನ್ನು ಎಸೆದು ಹೋಗಿದ್ದಾರೆ. ಇದರಿಂದಾಗಿ ಅಲ್ಲಿನ ನಿವಾಸಿಗಳಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದ್ದು ಸ್ಥಳಿಯ ಹಿರಿಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. 

ಈ ಕುರಿತಂತೆ ಅಲ್ಲಿನ ಸ್ಥಳಿಯರೊಬ್ಬರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದು ಇಲ್ಲಿ ಹಿಂದೂ-ಮುಸ್ಲಿಮರು ಬಹಳ ವರ್ಷದಿಂದ ಅನೋನ್ಯವಾಗಿ ವಾಸಿಸುತ್ತಿದ್ದಾರೆ. ಈ ಕೆರೆಯು ಮಳೆಗಾಲದಲ್ಲಿ ತುಂಬಿಕೊಂಡಿರುತ್ತದೆ. ಇದರ ಪರಿಸರವನ್ನು ನಾಶಮಾಡುವುದರಿಂದ ಎಲ್ಲರಿಗೂ ತೊಂದರೆಯಾಗುತ್ತದೆ. ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಎಲ್ಲ ಸಮುದಾಯದ ಕರ್ತವ್ಯವಾಗಿದ್ದು ಯಾರೂ ಕೂಡ ತಮ್ಮ ಹೊಣೆಗಾರಿಕೆಯಿಂದ ನುಣಚಿಕೊಳ್ಳದೆ ಪರಿಸರದ ಕಾನೂನು ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಭಟ್ಕಳದಲ್ಲಿ ಹಲವುಕಡೆಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಹಾಗೂ ಮನೆಯ ತ್ಯಾಜ್ಯ ವಸ್ತುಗಳನ್ನು ಎಸೆದು ಹೋಗುತ್ತಿರು ವವರ ವಿರುದ್ಧ ಪುರಸಭೆಯವರು ಕಠಿಣ ಕ್ರಮ ಜರಗಿಸಬೇಕು, ಆಯಾ ಭಾಗದಲ್ಲಿ ಸಿಸಿ ಟಿವಿ ಅಳವಡಿಸುವುದರ ಮೂಲಕ ಪರಿಸರ ವನ್ನು ಹಾಳು ಮಾಡುತ್ತಿರುವವರನ್ನು ಹಿಡಿದು ಶಿಕ್ಷಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News