ಭಟ್ಕಳ: ಸಹಾಯಕ ಆಯುಕ್ತ ಸಾಜಿದ್ ಮುಲ್ಲಾರಿಂದ ರಕ್ತದಾನ

Update: 2019-12-07 17:23 GMT

ಭಟ್ಕಳ: ಇಲ್ಲಿನ ವೆಲ್ಫೇರ್ ಆಸ್ಪತ್ರೆಯು ತಾಲೂಕಾ ಆಸ್ಪತ್ರೆ ಭಟ್ಕಳ, ಸರ್ಕಾರಿ ಆಸ್ಪತ್ರೆ ಬ್ಲಡ್ ಬ್ಯಾಂಕ್ ಉಡುಪಿಯ ಸಹಯೋಗದೊಂದಿಗೆ ವೆಲ್ಫೇರ್ ಆಸ್ಪತ್ರೆಯಲ್ಲಿ ಶನಿವಾರ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿತ್ತು.

ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ ರಕ್ತದಾನ ಮಾಡುವುದರ ಮೂಲಕ ಇತರರಿಗೆ ರಕ್ತದಾನ ಮಾಡುವಂತೆ ಪ್ರೇರೇಪಿಸಿದರು.

ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಭಟ್ಕಳ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ, ಡಾ. ಸವಿತಾ ಕಾಮತ್, ರಕ್ತದಾನವು ವ್ಯಕ್ತಿಯನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ. ಒಂದು ಘಟಕ ರಕ್ತ ಮೂವರು ವ್ಯಕ್ತಿಗಳ ಜೀವವನ್ನು ಉಳಿಸುತ್ತದೆ. ನೀವು ಜನರ ಜೀವವನ್ನು ಕಾಪಾಡಲು ಮುಂದೆ ಬನ್ನಿ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲ್ಫೇರ್ ಆಸ್ಪತ್ರೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಸೈಯ್ಯದ್ ಸಲಾಹುದ್ದೀನ್ ಎಸ್.ಕೆ ವಹಿಸಿದ್ದರು. ಉಡುಪಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡ.ವೀಣಾ, ವೆಲ್ಪೇರ್ ಆಸ್ಪತ್ರೆಯ ಡಾ. ಮುಹಮ್ಮದ್ ರಫೀಖ್, ಡಾ.ಸೈಯ್ಯದ್ ಅಬ್ದುಲ್ ಕಾದರ್, ಸೈಯ್ಯದ್ ಅಬುಲ್ ಆಲಾ ಬರ್ಮಾವರ್, ಯುನೂಸ್ ರುಕ್ನುದ್ದೀನ್, ನಝೀರ್ ಆಹ್ಮದ್ ಕಾಶಿಂಜಿ, ಇಕ್ಬಾಲ್ ಸುಹೇಲ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News