ರಿಯಲ್ ಎಸ್ಟೇಟ್,ನಿರ್ಮಾಣ ಉದ್ಯಮಗಳು ತೀವ್ರ ಸಂಕಷ್ಟದಲ್ಲಿ: ರಘುರಾಮ ರಾಜನ್

Update: 2019-12-07 18:13 GMT

ಹೊಸದಿಲ್ಲಿ,ಡಿ.7: ಭಾರತದ ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ಉದ್ಯಮಗಳು ತೀವ್ರ ಸಂಕಷ್ಟದಲ್ಲಿವೆ ಹಾಗೂ ಈ ಕ್ಷೇತ್ರಗಳಿಗೆ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ತಮ್ಮ ಆಸ್ತಿ ಗುಣಮಟ್ಟವನ್ನು ಪರಾಮರ್ಶಿಸಿಕೊಳ್ಳಬೇಕಿದೆ ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ ರಾಜನ್ ಅವರು ಹೇಳಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿಯೂ ತೀವ್ರ ಹತಾಶೆಯ ಸ್ಥಿತಿಯಿದೆ ಎಂದು ಇಂಗ್ಲಿಷ್ ನಿಯತಕಾಲಿಕವೊಂದರಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅವರು,ಭಾರತದ ಆರ್ಥಿಕತೆಯು ಮಂದಗತಿಯಲ್ಲಿದೆ ಮತ್ತು ನಿರುದ್ಯೋಗ ಸಮಸ್ಯೆಯು ಹೆಚ್ಚುತ್ತಿದೆ ಎಂದಿದ್ದಾರೆ.

ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ.4.5ಕ್ಕೆ ಕುಸಿದಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿಯ ಬಿಕ್ಕಟ್ಟು ಮತ್ತು ಬ್ಯಾಂಕುಗಳಲ್ಲಿ ಎನ್‌ಪಿಎ ಹೊರೆಯು ಆರ್ಥಿಕತೆಯಲ್ಲಿ ಸಾಲ ನೀಡಿಕೆಗೆ ಕಡಿವಾಣ ಹಾಕಿದೆ. ಆರ್‌ಬಿಐ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಆಸ್ತಿ ಗುಣಮಟ್ಟದ ಪರಾಮರ್ಶೆಯನ್ನು ನಡೆಸಬೇಕು ಎಂದೂ ರಾಜನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News