ಶಾಲೆಯಲ್ಲಿ ಗುಂಡಿನ ದಾಳಿ: 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಸೀದಿಯಲ್ಲಿ ಆಶ್ರಯ ನೀಡಿದ ವಿದ್ಯಾರ್ಥಿನಿ

Update: 2019-12-08 10:33 GMT

ಮ್ಯಾಡಿನ್ಸನ್: ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿ ಮತ್ತು ಚೂರಿ ದಾಳಿಯ ವೇಳೆ ಮಸೀದಿಯೊಂದರಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ ವಿದ್ಯಾರ್ಥಿನಿಯೊಬ್ಬಳ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಇಲ್ಲಿನ ಒಶ್ಕೋಶ್ ವೆಸ್ಟ್ ಹೈಸ್ಕೂಲ್ ನಲ್ಲಿ ಈ ದಾಳಿ ನಡೆದಿತ್ತು. 16 ವರ್ಷದ ವಿದ್ಯಾರ್ಥಿಯೊಬ್ಬ ಅಧಿಕಾರಿಯೊಬ್ಬರಿಗೆ ಚೂರಿಯಿಂದ ಇರಿದಿದ್ದ. ನಂತರ ಆತನಿಗೆ ಗುಂಡಿಕ್ಕಲಾಯಿತು.

ಈ ಸಂದರ್ಭ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಆತಂಕದಿಂದ ಹೊರಗೋಡಿ ಬಂದಿದ್ದು, ಇಲ್ಲೇ ಇದ್ದ ಒಶ್ಕೋಶ್ ಮಸೀದಿಯಲ್ಲಿ ವಿದ್ಯಾರ್ಥಿಯೊಬ್ಬಳು 100ಕ್ಕೂ ಅಧಿಕ ಮಕ್ಕಳಿಗೆ ಆಶ್ರಯ ಒದಗಿಸಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ವಿದ್ಯಾರ್ಥಿನಿ ದುಆ ಅಹ್ಮದ್, ಮಸೀದಿಯ ಸಮೀಪ ಓಡಿ ಬಂದು, ಎಲ್ಲಾ ವಿದ್ಯಾರ್ಥಿಗಳನ್ನು ಕರೆದು ಮಸೀದಿಯ ಬಾಗಿಲನ್ನು ತೆರೆದಿದ್ದಾಳೆ. ಮಸೀದಿಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ.

ಗುಂಡೇಟಿನ ಶಬ್ಧ ಕೇಳಿದಾಗ ತಾನು ಇಂಗ್ಲಿಷ್ ಸಾಹಿತ್ಯ ತರಗತಿಯಲ್ಲಿದ್ದೆ. ಯಾರಾದರೂ 911ಗೆ ಕರೆ ಮಾಡಿ ಮತ್ತು ತರಗತಿಯಿಂದ ಎಲ್ಲರೂ ಹೊರ ನಡೆಯಿರಿ ಎಂದು ಶಿಕ್ಷಕಿ ಹೇಳಿದರು. ಎಲ್ಲರೂ ಮಸೀದಿಯ ಬಳಿ ತೆರಳುವಂತೆ ಧರ್ಮ ಗುರುವೊಬ್ಬರು ತಿಳಿಸಿದರು ಎಂದು ದುಆ ವಿವರಿಸಿದ್ದಾರೆ.

"ನಾನು ಸಾಧ್ಯವಾದಷ್ಟು ವಿದ್ಯಾರ್ಥಿಗಳಿಗೆ ಮಸೀದಿಯಲ್ಲಿ ಆಶ್ರಯ ನೀಡಬೇಕೆಂದು ತೀರ್ಮಾನಿಸಿದೆ. ಮಸೀದಿಯ ಬಾಗಿಲನ್ನು ತೆರೆಯಲು ಸೆಕ್ಯುರಿಟಿ ಕೋಡ್ ಹಾಕಿದೆ" ಎಂದು ಅವರು ಹೇಳುತ್ತಾರೆ.

ದುಆ ಅವರ ತಂದೆಯಾದ ಸಾದ್ ಅಹ್ಮದ್ ಈ ಮಸೀದಿಯ ಹಣಕಾಸು ಕಾರ್ಯದರ್ಶಿಯಾಗಿದ್ದಾರೆ. "ಮಸೀದಿಗೆ ಪ್ರವೇಶಿಸಲು ಎಲ್ಲಾ ಸದಸ್ಯರಿಗೂ ಪ್ರತ್ಯೇಕ ಪಾಸ್ ವರ್ಡ್ ಗಳಿವೆ" ಎಂದವರು ಹೇಳುತ್ತಾರೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News