ಉಳ್ಳಾಲದಲ್ಲಿ ಕೌಟುಂಬಿಕ ರಕ್ತದಾನ ಶಿಬಿರ

Update: 2019-12-08 12:37 GMT

ಮಂಗಳೂರು: ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಮತ್ತು ಎಂ.ಕೆ ಫ್ಯಾಮಿಲಿ ಗ್ರೂಪ್ ಅಳೇಕಲ ಉಳ್ಳಾಲ ಇದರ ಜಂಟಿ ಆಶ್ರಯದಲ್ಲಿ ಕೆಎಂಸಿ ರಕ್ತನಿಧಿ ಮಂಗಳೂರು ಸಹಯೋಗದೊಂದಿಗೆ ಬೃಹತ್ ಕೌಟುಂಬಿಕ ರಕ್ತದಾನ ಶಿಬಿರವು ಅಳೇಕಲದ ಎಂ.ಕೆ ಹೌಸ್ ವಠಾರದಲ್ಲಿಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಕ್ಷೇತ್ರ ಶಾಸಕ ಯು.ಟಿ ಖಾದರ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು 'ಕುಟುಂಬ ಸಂಬಂಧಗಳು ಬಲಹೀನಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಕುಟುಂಬದ ಸದಸ್ಯರನ್ನು ಒಂದೆಡೆ ಒಗ್ಗೂಡಿಸಿ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಇಂತಹ ರಕ್ತದಾನ ಶಿಬಿರಗಳು ಎಲ್ಲೆಡೆ ನಡೆಯಲಿ' ಎಂದು ಹಾರೈಸಿದರು.

ಸ‌ಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಬಿಎಂಎಂಕೆ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಯು ಎಚ್ ಅಬ್ದುಲ್ ರಹಿಮಾನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಮಾಜ ಸೇವಕರಾದ ಝಾಕೀರ್ ಹುಸೈನ್, ಉಳ್ಳಾಲ ನಗರಸಭೆಯ ಕೌನ್ಸಿಲರ್ ಗಳಾದ ಅಸ್ಗರ್ ಆಲಿ, ಯು.ಎ ಇಸ್ಮಾಯಿಲ್, ಅಯ್ಯೂಬ್ ಮಂಚಿಲ, ಮಾಜಿ ಕೌನ್ಸಿಲರ್ ಅಬ್ದುಲ್ ಫತ್ತಾಕ್, ಎಸ್ಡಿಪಿಐ ಹಳೆಕೋಟೆ ವಾರ್ಡ್ ಸಮಿತಿಯ ಅಧ್ಯಕ್ಷ ಅಬ್ದುಲ್ ರವೂಫ್, ಎಂ.ಕೆ ಫ್ಯಾಮಿಲಿ ಟ್ರಸ್ಟ್ ಗೌರವಾಧ್ಯಕ್ಷ ಬಿ.ಎಸ್ ಕರೀಂ, ಎಂಬಿಎಂ ಎಂಕೆ ಮ್ಯಾರೇಜ್ ಫಂಡ್ ಗೌರವಾಧ್ಯಕ್ಷ ಯು.ಎಚ್ ಹೈದರಾಲಿ, ಖಜಾಂಜಿ ಹಂಝಾ ಎಂ.ಕೆ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಕ್ಯಾಂಪ್ ಇನ್ಚಾರ್ಜ್ ಸಿರಾಜ್ ಉಳಾಯಿಬೆಟ್ಟು ಮೊದಲಾದವರು ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮದ ಬಳಿಕ ರಕ್ತದಾನ ಶಿಬಿರ ನಡೆಯಿತು. ಸುಮಾರು 105 ಮಂದಿ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂಸ್ಥೆಯ ಗೌರವಾಧ್ಯಕ್ಷ ನಝೀರ್ ಹುಸೈನ್, ಅಧ್ಯಕ್ಷ ಇಫ್ತಿಕಾರ್ ಅಹ್ಮದ್, ಕಾರ್ಯದರ್ಶಿ ಸತ್ತಾರ್ ಪುತ್ತೂರು, ನಿರ್ದೇಶಕ ಶವೀದ್ ಅಲ್ಮಾಝ್, ವ್ಯವಸ್ಥಾಪಕ ಸಂಶುದ್ದೀನ್ ಬಳ್ಕುಂಜೆ, ಖಜಾಂಜಿ ಸಫ್ವಾನ್ ಕಲಾಯಿ ಹಾಗೂ ಕಾರ್ಯನಿರ್ವಾಹಕರಾದ ಮುಸ್ತಫಾ ಕೆ.ಸಿ.ರೋಡ್, ಖಾದರ್ ಮುಂಚೂರು, ಮರ್ಝೂಕ್, ನೌಶಾದ್ ಮೊದಲಾದವರು ಸಹಕರಿಸಿದರು.

ಕಾರ್ಯಕ್ರಮದಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ರಿ ಸಂಸ್ಥೆಯ ಮಾಧ್ಯಮ ಕಾರ್ಯದರ್ಶಿ ಸಫ್ವಾನ್ ಸವಣೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಿಯಾಝ್ ಎಂ.ಕೆ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News