ಮೇಲ್ತೆನೆಯಿಂದ ಮೀಲಾದ್ ಕವಿಗೋಷ್ಠಿ-ಭಾಷಣ ಸ್ಪರ್ಧೆ

Update: 2019-12-08 14:31 GMT

ಮಂಗಳೂರು, ಡಿ.8: ದೇರಳಕಟ್ಟೆಯ ಬ್ಯಾರಿ ಎಲ್ತ್‌ಗಾರ್-ಕಲಾವಿದರ ಬಳಗ ‘ಮೇಲ್ತೆನೆ’ಯ ವತಿಯಿಂದ ಮೀಲಾದ್ ಕವಿಗೋಷ್ಠಿ ಮತ್ತು ಬ್ಯಾರಿ ಭಾಷಣ ಸ್ಪರ್ಧೆಯು ರವಿವಾರ ದೇರಳಕಟ್ಟೆಯ ಚಿಂತನಾ ಗ್ರಂಥಾಲಯದಲ್ಲಿ ಜರುಗಿತು.

ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಕವಿ ಬಶೀರ್ ಅಹ್ಮದ್ ಕಿನ್ಯ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ತಬೂಕ್ ಅಬ್ದುಲ್ ರಹ್ಮಾನ್ ದಾರಿಮಿ ಮತ್ತು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಕರೀಂ ಭಾಗವಹಿಸಿ ಶುಭ ಹಾರೈಸಿದರು.

ಸಫ್ವಾನ್ ಸವಣೂರು, ಸಲೀಂ ಇರುವಂಬುಳ್ಳ, ಬಶೀರ್ ಅಹ್ಮದ್ ಕಿನ್ಯ, ಅಶೀರುದ್ದೀನ್ ಆಲಿಯಾ ಮೀಲಾದ್ ಕವನ ವಾಚಿಸಿದರು. ಅಧ್ಯಕ್ಷ ಹಂಝ ಮಲಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿ ದರು. ಉಪಾಧ್ಯಕ್ಷ ಮುಹಮ್ಮದ್ ಬಾಷಾ ನಾಟೆಕಲ್ ವಂದಿಸಿದರು. ಸದಸ್ಯ ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.

ಪ್ರವಾದಿ ಮುಹಮ್ಮದ್ (ಸ)ಅವರ ಕುರಿತು ಬ್ಯಾರಿ ಭಾಷೆಯಲ್ಲಿ ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ಸಾಲಿಮ್ (ಪ್ರಥಮ), ಮುಹಮ್ಮದ್ ಶಫೀಕ್ (ದ್ವಿತೀಯ), ಮುಹಮ್ಮದ್ ರಿಹಾನ್ (ತೃತೀಯ) ಹಾಗೂ ಇಬ್ರಾಹೀಂ ಇನಾಯೀಝ್, ಮುಹಮ್ಮದ್ ಸಫೀಲ್, ಮಾಯಿಝ್ ಉಮರ್, ಮುಹಮ್ಮದ್ ಅಫ್ನಾನ್ ಅಲಿ, ಮುಹಮ್ಮದ್ ನಫೀಲ್, ನಿಶಾದ್ ಅಮಾನ್, ಮುಹಮ್ಮದ್ ಆಝಿಮ್, ಅಬ್ದುಲ್ ಹಸೀಬ್ (ಸಮಾಧಾನಕರ) ಬಹುಮಾನ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News