​ಡಿ.15: ದ.ಕ. ಜಿಲ್ಲಾ ಮಟ್ಟದ ರ್ಯಾಪಿಡ್ ಚೆಸ್ ಸ್ಪರ್ಧೆ

Update: 2019-12-08 14:35 GMT

ಮಂಗಳೂರು, ಡಿ.8: ಬಾಬ್ಬಿ ಫಿಶರ್ ಚೆಸ್ ಎಸೋಸಿಯೇಶನ್ ಸುಳ್ಯ ತಾಲೂಕು ವತಿಯಿಂದ ದ.ಕ.ಜಿಲ್ಲಾ ಮಟ್ಟದ ರ್ಯಾಪಿಡ್ ಚೆಸ್ ಸ್ಪರ್ಧೆಯು ಡಿ.15ರಂದು ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆಯಲಿದೆ.

ಚೆಸ್ ರಾಜ್ಯ ಮಾಜಿ ಚಾಂಪಿಯನ್ ಶ್ರೀರಾಮ ಕೋಟೆ ಪಂದ್ಯ ಉದ್ಘಾಟಿಸುವರು. ಬಾಬ್ಬಿ ಫಿಶರ್ ಚೆಸ್ ಎಸೋಸಿಯೇಶನ್ ಅಧ್ಯಕ್ಷ ವಿ.ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸುವರು. ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಸಂಚಾಲಕ ಎಂ.ಪಿ.ಉಮೇಶ್ ಅತಿಥಿಯಾಗಿರುವರು.

ಸಂಜೆ ಬಹುಮಾನ ವಿತರಣೆ ನಡೆಯಲಿದೆ. ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲೆ ದೇಚಮ್ಮ ಡಿ.ಟಿ, ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ, ಕೆ.ಮಹಮ್ಮದ್ ಇಂಜಿನಿಯರ್ ಅತಿಥಿಗಳಾಗಿ ಭಾಗವಹಿಸುವರು.

ಸ್ಪರ್ಧೆಯಲ್ಲಿ ಭಾಗವಹಿಸುವವರು ಡಿ.14 ಸಂಜೆ 6ಗಂಟೆಯೊಳಗೆ ನೋಂದಣಿ ಮಾಡಬಹುದು. ವಿವಿಧ ವಯೋಮಾನದ ಪ್ರಶಸ್ತಿಗಳ ಅರ್ಹತೆಗಾಗಿ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಸ್ಪರ್ಧಿಗಳು ಚೆಸ್ ಬೋರ್ಡ್, ಕಾಯಿನ್ ಹಾಗೂ ಕ್ಲಾಕ್‌ಗಳನ್ನು ತರಬೇಕು. ಮಾಹಿತಿಗೆ 9481909533ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News