ಅಕ್ರಮ ಜಾನುವಾರು ಸಾಗಾಟ ಆರೋಪ : ಸೊತ್ತು ಸಹಿತ ಓರ್ವ ಸೆರೆ

Update: 2019-12-08 16:20 GMT

ಉಪ್ಪಿನಂಗಡಿ : ಗೋವನ್ನು ವಧಿಸಿ ಕಂಟೈನರ್ ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು 800 ಕೆ ಜಿ ಗೋ ಮಾಂಸ  ಹಾಗೂ ಓರ್ವ ಆರೋಪಿಯನ್ನು ವಾಹನ ಸಹಿತ ವಶಕ್ಕೆ ತೆಗೆದುಕೊಂಡ ಘಟನೆ  ಉಪ್ಪಿನಂಗಡಿಯಿಂದ ವರದಿಯಾಗಿದೆ.

ಖಚಿತ ಮಾಹಿತಿಯ ಮೇರೆಗೆ ಶಿರಾಡಿಗ್ರಾಮದ ಗುಂಡ್ಯ ಬಳಿ ಉಪ್ಪಿನಂಗಡಿ ಪೊಲೀಸರು ತಪಾಸಣೆ ನಿರತರಾಗಿದ್ದ ವೇಳೆ ಕಂಟೈನರ್ ಲಾರಿಯೊಂದರಲ್ಲಿ ಭಾರೀ ಪ್ರಮಾಣದ ದನದ ಮಾಂಸ ಸಾಗಾಟ ಮಾಡಲಾಗುತ್ತಿರುವುದು ಕಂಡು ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಸಾಗಾಟ ನಿರತರಾಗಿದ್ದ ಕಂಟೈನರ್ ಚಾಲಕ ಬಂದಾರ್ ನಿವಾಸಿ  ರಿಝ್ವಾನ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು  ವಿಚಾರಿಸಿದಾಗ , ಚೆನ್ನರಾಯಪಟ್ಟಣದಿಂದ ಅಕ್ರಮವಾಗಿ ಗೋವುಗಳನ್ನು ವಧಿಸಿ ಕಂಟೈನರ್ ನಲ್ಲಿ ತುಂಬಿಸಿ ಮಂಗಳೂರಿನ ಜುಲ್ಫಿಕರ್ ಎಂಬಾತನಿಗೆ ತಲುಪಿಸುತ್ತಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News