ಲಾಡ್ಜ್‌ಗೆ ನುಗ್ಗಿ ದಾಂಧಲೆ: ಲಕ್ಷಾಂತರ ರೂ. ನಷ್ಟ

Update: 2019-12-08 16:23 GMT

ಉಡುಪಿ, ಡಿ. 8: ಉಡುಪಿಯ ಕಲ್ಪನಾ ಲಾಡ್ಜ್‌ಗೆ ಅಕ್ರಮವಾಗಿ ಪ್ರವೇಶಿಸಿ ಅಲ್ಲಿನ ಸೊತ್ತುಗಳನ್ನು ಒಡೆದು ಹಾಕಿ, ಜಾಗದಲ್ಲಿದ್ದ ಹಳೆ ಕಟ್ಟಡ ಸಾಮಗ್ರಿಗಳನ್ನು ಮಾರಾಟ ಮಾಡಿ, ಕಾಡು ಮರಗಳನ್ನು ಕಡಿದು ಸಾಗಿಸಿ ಸುಮಾರು 1 ಲಕ್ಷ ರೂ. ನಷ್ಟ ಉಂಟು ಮಾಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರ ಅಪೆಕ್ಸ್ ಬ್ಯಾಂಕಿನ ಫೈನಾನ್ಸರ್ ಆಗಿರುವ ವಿವೇಕಾನಂದ ಎಂಬ ವರು ಉಡುಪಿ ಕಲ್ಪನಾ ಲಾಡ್ಜ್‌ನ್ನು ಕೆ.ರಾಮಚಂದ್ರ ನಾಯಕ್ ಎಂಬವರಿಗೆ ಉಸ್ತುವಾರಿ ನೋಡಿಕೊಳ್ಳಲು ಅಧಿಕಾರ ಪತ್ರ ನೀಡಿದ್ದರು. ಆದರೆ ರಾಮಚಂದ್ರ ಲಾಡ್ಜ್‌ನ್ನು ಲಾಭ ದಾಯಕವಾಗಿ ನಡೆಸದೆ ಬಾಡಿಗೆ ಬಾಕಿ ಇಟ್ಟುಕೊಂಡಿದ್ದ ರಿಂದ ಸೆ.30ರಂದು ಅವರ ಸರ್ವಿಸ್ ಕಾಂಟ್ರಾಕ್ಟ್ ರದ್ದುಗೊಳಿಸಲಾಗಿತ್ತು.
ಬಳಿಕ ವಿವೇಕಾನಂದ ಲಾಡ್ಜ್ ನಡೆಸಲು ಸತೀಶ್ ಶೆಟ್ಟಿ ಮತ್ತು ಉಮೇಶ್ ಶೆಟ್ಟಿ ಎಂಬವರೊಂದಿಗೆ ಕರಾರು ಮಾಡಿಕೊಂಡಿದ್ದರು. ಇದೇ ದ್ವೇಷದಿಂದ ರಾಮಚಂದ್ರ ನಾಯಕ್ ಡಿ.7ರಂದು ಲಾಡ್ಜ್‌ಗೆ ಅಕ್ರಮವಾಗಿ ಪ್ರವೇಶಿಸಿ ಸತೀಶ್ಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಸೊತ್ತುಗಳಿಗೆ ಹಾನಿ ಎಸಗಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News