ಮಂಗಳೂರು: ಶೆಪರ್ಡ್ಸ ಫೆಸ್ಟ್ 2019 ಉದ್ಘಾಟನೆ

Update: 2019-12-08 16:43 GMT

ಮಂಗಳೂರು, ಡಿ. 8: ನಗರದ ಅತ್ತಾವರದ ಐವರಿ ಎನ್ ಕ್ಲೇ ವ್ ವಠಾರದಲ್ಲಿ ಶೆಪರ್ಡ್ಸ್ ಇಂಟರ್ ನ್ಯಾಶನಲ್ ಅಕಾಡೆಮಿಯ ವತಿಯಿಂದ ಹಮ್ಮಿಕೊಂಡ 'ಶೆಪರ್ಡ್ಸ್ ಫೆಸ್ಟ್ 2019'ನ್ನು ಸಂಸ್ಥೆಯ ಸಲಹೆಗಾರ ಹಾಗೂ ಬೀದರ್ ಶಹೀನ್ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ಡಾ. ಅಬ್ದುಲ್ ಖಾದಿರ್, ಮನಪಾ ಸದಸ್ಯ ಅಬ್ದುಲ್ ರವೂಫ್ ,ಆ್ಯಪಲ್ ಮಾರ್ಟ್ ಎಂ.ಡಿ. ಅಬ್ಬಾಸ್ ನಾರ್ಶಾ, ಎ.ಕೆ.ಸಮೂಹ ಸಂಸ್ಥೆ ಗಳ ನಿರ್ದೇಶಕ ಹನೀಫ್ ಪಿ.ಎಸ್, ರಾಯಲ್ ಟ್ರೀಟ್ ನ ಮಾಲಕ ಬರಾಕತ್ ಅಹ್ಮದ್ ಮತ್ತು ಅನಿಲ್ ಕುಮಾರ್ ಜೊತೆಯಾಗಿ ಉದ್ಘಾಟಿಸಿದರು.

ಸಮಾರಂಭದಲ್ಲಿ ಚಿತ್ರಕಲೆ, ಕರಕುಶಲ ಕಲೆ, ಕಾಗದದ ಮೂಲಕ ಕಲಾಕ್ರತಿ ರಚನೆ, ಮಣ್ಣಿನ ಮಡಕೆ, ಹಚ್ಚೆ ಕಲೆಯೊಂದಿಗೆ ವಿದ್ಯಾರ್ಥಿ ಗಳಿಗೆ ವಿವಿಧ ಮನೋರಂಜನಾ ಕಾರ್ಯಕ್ರಮ, ವಿಶೇಷವಾಗಿ ಆಹಾರ ಮಳಿಗೆಗಳು ಫೆಸ್ಟ್ ನ ವಿಶೇಷ ಆಕರ್ಷಣೆ ಯಾಗಿತ್ತು. ವಿದ್ಯಾರ್ಥಿಗಳು ಮತ್ತು ಪೋಷಕ ರನ್ನು ಪಾಲ್ಗೊಳ್ಳಲು ವಿಶೇಷ ವಾಗಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News